ಏಂಜಲೀನ ನಿಕಾಲೋ ಅನ್ನೋ ರಷ್ಯನ್ ಮಹಿಳೆಗೆ ಈ ತರಹದ ಒಂದು ಡೇಂಜರಸ್ ಫೋಟೋಗ್ರಾಫಿಯ ಗೀಳು ಅಂಟಿಕೊಂಡುಬಿಟ್ಟಿದೆ.ಈ ನಿಕಾಲೋ ಎಂಬ ರಷ್ಯನ್ ಮಹಿಳೆಯು ಎಂತಹುದೇ ರಿಸ್ಕಿ ಫೋಟೋಗ್ರಾಫ್ ಹಾಗೂ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳಲು ರೆಡಿಯಾಗಿದ್ದಾಳೆ.ಈಕೆಯ ಫೋಟೋ ನೋಡಿದರಷ್ಟಕ್ಕೇ ನಾವು ತಲೆತಿರುಗಿ ಬೀಳದಿದ್ದರೆ ಸಾಕು ಅನಿಸುತ್ತೆ! ಅಂಥಹುದರಲ್ಲಿ ಈ ಫೋಟೋ ಕ್ಲಿಕ್ಕಿಸುವಾಕೆ ಯಾವುದೇ ಅಂಜಿಕೆಯಿಲ್ಲದೆ ಸೂಪರ್ ಆಗಿ ಫೋಟೋಗೆ ಫೋಸ್ ಕೊಡೋದು ನೋಡಿ ನಿಮ್ಮ ಮೂಗಿನ ಮೇಲೆ ನೀವು ಬೆರಳು ಇಟ್ಟಲ್ಲಿ ಆಶ್ಚರ್ಯವೇನಿಲ್ಲ.ಹೌದು! ಈಕೆ ಹಲವಾರು ಬಾರಿ ಹತ್ತು ಹಲವು ಭಂಗಿಯಲ್ಲಿ ಬಹುಮಹಡಿ ಕಟ್ಟಡದ ಮೇಲೆ ಹತ್ತಿ ಹೋಗಿ ನಿಂತು ಹೀಗೊಂದು ತರಹದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಳೆ.ಈಕೆ ಅನೇಕ ತರಹದ ಸಾಹಸಗಳನ್ನು ಇಷ್ಟಪಡುವಾಕೆ ಎಂದು ಈಕೆಯ ಫೋಟೋಗಳೇ ನಮಗೆ ತಿಳಿಸುತ್ತವೆ.ನಮ್ಮಲ್ಲಿ ಅನೇಕರು ಅಂತಹ ಕಟ್ಟಡಗಳನ್ನು ನೋಡಿದಲ್ಲೇ ಭಯ ಪಟ್ಟುಕೊಳ್ಳುತ್ತೇವೆ ಆದರೆ ಈಕೆ ತೀರಾ ವಿಭಿನ್ನ ನೋಡಿ.ಈಕೆ ಸಂತೋಷದಿಂದ ಎಂಜಾಯ್ ಮಾಡುತ್ತಾ ತನ್ನ ಹಲವಾರು ಯೋಗ ಭಂಗಿ ಗಳನ್ನು ಅಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಳೆ.
ಈಕೆಯ ಖತರ್ನಾಕ್ ಫೋಟೋಗಳತ್ತ ಒಮ್ಮೆ ನಿಮ್ಮ ದೃಷ್ಟಿ ಹಾಯಿಸಿ ನೋಡಿ.
ಸ್ನೇಹಿತರೇ! ತಮ್ಮ ಜೀವಕ್ಕೇ ತಾವೇ ಅಪಾಯ ತಂದೊಡ್ಡುವ ಇಂತಹ ಹವ್ಯಾಸ ಇದ್ದರೆಷ್ಟು ಬಿಟ್ಟರೆಷ್ಟು. ನಾವು ಇಂತಹ ಹುಚ್ಚು ಹವ್ಯಾಸಗಳನ್ನು ಎಂದಿಗೂ ಪ್ರಶಂಸಿಸಲಾರೆವು, ನೀವು ಇಂತಹ ಮಂಗನ ಚೇಷ್ಟೆಯನ್ನು ದಯವಿಟ್ಟು ಎಂದಿಗೂ ಪ್ರಯತ್ನಿಸಬೇಡಿ ಎಂಬುದು ನಿಮ್ಮಲ್ಲಿ ನಮ್ಮ ಒಂದು ರಿಕ್ವೆಸ್ಟ್….
Images Source: Instagram Account Of Angela Nikolau
POPULAR STORIES :
ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!
ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??
ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!
ಪತ್ರಕರ್ತನನ್ನು ನೋಡಿದ ಆ ರೋಗಿ ವಿಚಿತ್ರವಾಗಿ ಮಾತಾಡ್ತಾನೆ..! ‘ಅನ್ವೇಷಿ’ ನೋಡಿದ್ರೆ ಎಲ್ಲವೂ ಅರ್ಥವಾಗುತ್ತೆ..!
ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!
ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….