No menu items!
22.3 C
Munich
Tuesday, May 5, 2026

ಪೊಲೀಸರ ಜೀಪ್ ಅನ್ನೇ ಕದ್ದ ಖದೀಮ: ಸಿನಿಮಾ ಸ್ಟೈಲಿನಲ್ಲಿ ಆರೋಪಿ ಅರೆಸ್ಟ್

Must read

ತುಮಕೂರು: ಪೊಲೀಸರ 112 ವಾಹನವನ್ನೆ ಓಡಿಸಿಕೊಂಡು ಪರಾರಿಯಾದ ವ್ಯಕ್ತಿಯನ್ನು ಸಿನಿಮಾ ಸ್ಟೈಲಿನಲ್ಲಿ ಚೇಸ್ ಮಾಡಿ ಪತ್ತೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ. ತಡರಾತ್ರಿ ಗ್ರಾಮದ ಸಿಎಸ್ ಪುರ ಪೊಲೀಸ್ ಠಾಣೆ ಯ ವ್ಯಾಪ್ತಿಯಲ್ಲಿ ಸಹೋದರಿಬ್ಬರ ನಡುವೆ ಗಲಾಟೆ ಆಗ್ತಿತ್ತು. ಈ ವೇಳೆ ಆರೋಪಿ ಸಹೋದರ 112 ಗೆ ಕರೆ ಮಾಡಿದ್ದರಿಂದ ಗ್ರಾಮಕ್ಕೆ ವಾಹನ ಬಂದಿತ್ತು.. ಈ ವೇಳೆ ಆರೋಪಿ ಹಿಂದೆ ಇದ್ದ 112 ಕಾರಿನ ಮೇಲೆ ಕಲ್ಲು ಎತ್ತಿಹಾಕಿದ್ದಾನೆ.
ಇದನ್ನ ಗಮನಿಸಲು 112 ಚಾಲಕ ಹಿಂದೆ ಬಂದಿದ್ದಾನೆ.. ಈ ವೇಳೆ ಮುಂದೆ ಹೋಗಿ ಕಾರು ತೆಗೆದುಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ.

ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿ ಆರೋಪಿಯನ್ನೂ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ತಾಲೂಕಿನ ಹೆಬ್ಬೂರು ಬಳಿ ವಾಹನ ಪತ್ತೆಯಾಗಿದ್ದು, ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಘಟನೆ ಸಂಭಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article