No menu items!
28.1 C
Munich
Friday, June 19, 2026

ಬಿಜೆಪಿ ಬಂಡವಾಳವೇ ಸುಳ್ಳು ಹೇಳುವುದು: ಸಿಎಂ ಸಿದ್ದರಾಮಯ್ಯ

Must read

ಬೆಂಗಳೂರು:ಬಿಜೆಪಿ ಬಂಡವಾಳವೇ ಸುಳ್ಳು ಹೇಳುವುದು. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂದು ಬಿಜೆಪಿ ಸಾಬೀತು ಪಡಿಸಿಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಬಂಡವಾಳವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬುದನ್ನು ಅವರು ಸಾಬೀತುಪಡಿಸಲಿ ಎಂದರು.
ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಜನರನ್ನೂ ತಲುಪುತ್ತಿಲ್ಲ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕೇವಲ ಆರೋಪ ಮಾಡುವ ಉದ್ದೇಶದಿಂದ ಆರೋಪಿಸುತ್ತಿದ್ದಾರೆ. ಇದುವರೆಗೆ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದೆ. ಇದರಲ್ಲಿ 1.14 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿದ್ದು, ಇನ್ನೂ 3 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿಸಲಾಗುವುದು ಎಂದರು.

- Advertisement -spot_img

More articles

- Advertisement -spot_img

Latest article