ಲೀನವಾದ ಲೀಲಾವತಿ !

By
1 Min Read

ಕನ್ನಡ ಸಿನಿಮಾ ರಂಗದ ಅಭೂತಪೂರ್ವ ನಟಿ ಲೀಲಾವತಿ ಇಹಲೋಕ ತ್ಯಜಿಸಿದ್ದು, ಅವರ ಅಂತ್ಯಕ್ರಿಯೆ ಅವರ ತೋಟದ ಮನೆಯಲ್ಲಿ ನೆರೆವೇರಿದೆ. ಬಂಟ ಸಂಪ್ರದಾಯದಂತೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಲೀಲಮ್ಮಾ ರಂಗಭೂಮಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು, ಲೀಲಾವತಿ ಅವರು, ಆನಂತರ ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಇಂಡಸ್ಟ್ರಿಯಲ್ಲಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1949ರಲ್ಲಿ ತೆರೆ ಕಂಡ ಶಂಕರ್ ಸಿಂಗ್ ಅವರ ನಾಗಕನ್ನಿಕ ಇವರ ಮೊದಲ ಚಿತ್ರ. ರಂಗಭೂಮಿಯಲ್ಲಿ ಅಭಿನಯದ ಪಟ್ಟುಗಳನ್ನು ಕಲಿತಿದ್ದ ಯುವತಿ ಲೀಲಾವತಿ ಚಿತ್ರರಂಗ ಪ್ರವೇಶಿಸಿದ್ದು 1949ರಲ್ಲಿ. ಶಂಕರ್‌ಸಿಂಗ್‌ ನಿರ್ಮಾಣದ ‘ನಾಗಕನ್ನಿಕಾ’ ಚಿತ್ರದಲ್ಲಿನ ಪುಟ್ಟ ಪಾತ್ರದ ಮೂಲಕ.

ಅದಾದ ಬಳಿಕ ಬೆಳ್ಳಿ ತೆರೆಮೇಲೆ ತಮ್ಮದೆ ಆದ ಛಾಪು ಮೂಡಿಸುತ್ತಾರೆ. ಅಲ್ಲಿಂದ 600 ಚಿತ್ರಗಳ ಒಡತಿಯಾಗಿ ಚಿತ್ರರಂಗವನ್ನ ಆಳುತ್ತಾರೆ. 60 ರ ದಶಕದಲ್ಲಿ ಟಾಪ್ ಮೋಸ್ಟ್ ನಟಿಯಾಗಿ ನಾಯಕನಿಗಿಂತ ಹೆಚ್ಚು ಸಂಭಾವನೆಯನ್ನ ಪಡೆಯುತ್ತಾರೆ.


ಅವರು ನೆಲಮಂಗಲ್ ಸೋಲದೇವನ ಹಳ್ಳಿಯಲ್ಲಿ ಅವರ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಕಳೆದ ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆ ಅವರನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು. ದೀರ್ಘಕಾಲದ ಅನಾರೋಗ್ಯದ ಕಾರಣ 2023ರ ಡಿಸೆಂಬರ್‌ 8ರಂದು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿ ಲೀನವಾಗಿದ್ದಾರೆ ಲೀಲಾವತಿಯವರು.

Share This Article