No menu items!
19.9 C
Munich
Saturday, August 22, 2026

ಸುವರ್ಣಸೌಧ 6 ನೇ ದಿನಕ್ಕೆ ಕಾಲಿಟ್ಟ ಕಲಾಪ, ಇಂದು ಏನೆಲ್ಲಾ ಚರ್ಚೆ!?

Must read

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ 6 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆ ಬಗ್ಗೆ ಚರ್ಚೆ ನಡೆಯಲಿದೆ. ಇಂದು ಯತ್ನಾಳ್ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಕೈಗೆತ್ತುಕೊಳ್ಳಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ,ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಚರ್ಚೆಯಲ್ಲಿ ಭಾಗಿ ಸಾಧ್ಯತೆ ಇದೆ.
ಇನ್ನೂ ಬರ ಮತ್ತು ಪರಿಹಾರ ಕುರಿತಂತೆ ಕಳೆದ ಮೂರು ದಿನಗಳಿಂದ ನಡೆದ ಚೆರ್ಚೆ ಮೇಲೆ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ ಹಾಗೂ ಕೃಷಿ ಇಲಾಖೆ ಸಚಿವರಿಂದ ಉತ್ತರ ಸಾಧ್ಯತೆ ಇದೆ. ವಿಧಾನ ಸಭೆಯಲ್ಲಿ ಹಾಕಿರುವ ಸಾವರ್ಕರ್ ಪೋಟೋ ಮತ್ತು ನಿಯಮಾವಳಿ ಪ್ರಕಾರ ಬದಲಾವಣೆಗೆ ಕಾಂಗ್ರೆಸ್ ಕೆಲ ಶಾಸಕರ ಆಗ್ರಹ ಗಮನ ಸೆಳೆಯುವ ಸೂಚನೆ ಮೂಲಕ ಚೆರ್ಚೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಇಂದು ನಡೆಸಲು ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಸಭೆ ರದ್ದು ಮಾಡಲಾಗಿದೆ. ಅಧಿವೇಶನ ಆರಂಭಕ್ಕು ಮುನ್ನ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ದೂರದ ಊರಿಂದ ಎಲ್ಲರು ಸಮಯಕ್ಕೆ ಸರಿಯಾಗಿ ಸಭೆಗೆ ಬರೋದು ಕಷ್ಟ. ಹೀಗಾಗಿ ಬೆಳಿಗ್ಗೆ ಕರೆದಿದ್ದ ಸಭೆ ರದ್ದು ಮಾಡಲಾಗಿದೆ. ನಾಳೆ ಸಂಜೆ ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಶಾಸಕಾಂಗ ಸಭೆ ನಡೆಸಲಾಗುವುದು. ನಾಡಿದ್ದು ಬೆಂಗಳೂರು ಶಾಸಕರ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.

- Advertisement -spot_img

More articles

- Advertisement -spot_img

Latest article