No menu items!
20.9 C
Munich
Friday, August 21, 2026

ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಆರೋಪಿಗಳ ಬಂಧನ..!

Must read

ಬೆಂಗಳೂರು: ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಆರೋಪಿಗಳನ್ನೂ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳಾಗಿದ್ದು, ಆರೋಪಿ ಯುವರಾಜು, ಪ್ರಭು, ಸೆಲ್ವರಾಜು ಕೆಆರ್‌ ಪುರಂನಲ್ಲಿ ರೂಂ ಮಾಡಿಕೊಂಡಿದ್ದ ಗ್ಯಾಂಗ್. ಬೆಳಗ್ಗೆಯೆ ನಗರಕ್ಕೆ ಎಂಟ್ರಿ ಕೊಟ್ಟು ಪಿಜಿ ಹುಡುಕುತ್ತಿದ್ದ ಖದೀಮರು. ಸ್ಟೂಡೆಂಟ್ಸ್ ರೀತಿ ಡ್ರೆಸ್ ಮಾಡ್ಕೊಂಡು ಪಿಜಿಗಳ ಬಳಿ ಹೋಗ್ತಿದ್ದ ಆರೋಪಿಗಳು.
ಮೊದಲಿಗೆ ಪಿಜಿಗೆ ಸೇರುವ ನೆಪದಲ್ಲಿ ಇಡೀ ಪಿಜಿ ಅಬ್ಸರ್ವ್ ಮಾಡುತ್ತಿದ್ದ ಗ್ಯಾಂಗ್ ಯಾವ್ಯಾವ ರೂಂ ಅಂತಸ್ತಿನಲ್ಲಿ ಪಿಜಿಗಳಿವೆ ಎಂಬುದನ್ನು ಪತ್ತೆಹಚ್ಚಿ ಮರುದಿನ ದೋಚಲು ಪ್ಲಾನ್ ರೆಡಿ ಮಾಡುತ್ತಿದ್ದರು. ಬೆಳಗ್ಗೆ ಎಲ್ಲರೂ ಕೆಲಸ, ಕಾಲೇಜು ಅಂತಾ ಪಿಜಿಯಿಂದ ಹೋಗುವುದರಿಂದ ಇದೇ ಸಮಯದಲ್ಲೇ ಕಳ್ಳತನಕ್ಕೆ ಇಳಿಯುತ್ತಿದ್ದ ಆರೋಪಿಗಳು. ಬೆಳಗ್ಗೆ‌ 9ರಿಂದ 10ಗಂಟೆ ಟೈಮಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದರು. ಸದ್ಯ ಬಂಧಿತರಿಂದ 50ಲ್ಯಾಪ್ ಟಾಪ್ ಗಳು, 22ಮೊಬೈಲ್ ಗಳು ಜಪ್ತಿ ಮಾಡಲಾಗಿದ್ದು, ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

- Advertisement -spot_img

More articles

- Advertisement -spot_img

Latest article