No menu items!
18.4 C
Munich
Friday, August 21, 2026

ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನ ಮೇಲೆ ಪುಂಡಾಟ..!

Must read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನ ಮೇಲೆ ಪುಂಡಾಟ ನಡೆಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಅಲ್ಲದೇ ಹಿರಿಯರು ಎನ್ನುವುದನ್ನು ಲೆಕ್ಕಿಸದೇ ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ಮಾಡಿ ಕಾಲಲ್ಲಿ ಒದ್ದು ವಿಕೃತಿ ಮೆರೆಯಲಾಗಿದೆ. ಗಿರಿನಗರದ ಮೂಕಾಂಭಿಕನಗರದಲ್ಲಿ ಘಟನೆ ಜರುಗಿದೆ. ಘಟನೆ ನಂತರ ಆರೋಪಿ ಧರ್ಮ ತಲೆಮರೆಸಿಕೊಂಡಿದ್ದಾನೆ.


ಸಿಂಗಾರ ವೇಲು ಎಂಬುವವರು ಗಿರಿನಗರದ ಮನೆ ಬಳಿ ಕಬಾಬ್ ತಿನ್ನುತ್ತಿದ್ರು. ಈ ವೇಳೆ ಎಂಟ್ರಿಕೊಟ್ಟಿದ್ದ ಆರೋಪಿ ಧರ್ಮ, ನೈಂಟಿ ಎಣ್ಣೆ ಕೊಡಿಸು ಅಂತ ಸಿಂಗಾರ ವೇಲುರಿಗೆ ಪೀಡಿಸಿದ್ದಾನೆ. ಕೊಡಿಸದಿದ್ದಾಗ ಕಾಲಲ್ಲಿ ಒದ್ದಿದ್ದಲ್ಲದೇ, ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ.
ಹಲ್ಲೆ ಪರಿಣಾಮ ಸಿಂಗಾರ ವೇಲುರ ತುಟಿ ಹರಿದು ಹೋಗಿದೆ. ಸದ್ಯ ಆಸ್ಪತ್ರೆಯಲ್ಲಿ ಸಿಂಗಾರವೇಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ. ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 29 ರ ರಾತ್ರಿ 8:30 ರ ಸುಮಾರಿಗೆ ಘಟನೆ ಜರುಗಿದ್ದು, ಗಿರಿನಗರ ಪೊಲೀಸರಿಂದ ಆರೋಪಿ ಧರ್ಮನಿಗಾಗಿ ತಲಾಶ್ ನಡೆದಿದೆ.

- Advertisement -spot_img

More articles

- Advertisement -spot_img

Latest article