No menu items!
19.5 C
Munich
Monday, June 22, 2026

ಕುಡಿದ ಮತ್ತಿನಲ್ಲಿ ಮಗುವನ್ನು ಎತ್ತಿ ಬೀಸಾಡಿದ ತಂದೆ: ಚಿಕಿತ್ಸೆ ಫಲಿಕಾರಿಯಾದೆ ಮಗು ಸಾವು

Must read

ಧಾರವಾಡ: ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಮಗು ಅತ್ತು ತನ್ನ ನಿದ್ದೆ ಹಾಳು ಮಾಡುತ್ತಿದೆ ಎಂದು ಕೋಪಗೊಂಡ ತಂದೆ ಒಂದು ವರ್ಷದ ಪುಟ್ಟ ಕಂದಮ್ಮನ ಗೋಡೆಗೆ ಎಸೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಮಲಗಿದ್ದಾಗ ಅಳುತ್ತಿದ್ದ ಹೆಣ್ಣು ಮಗುವಿನ ಮೇಲೆ ಸಿಟ್ಟಿಗೆದ್ದ ತಂದೆ ಮಗುವನ್ನ ಗೋಡೆಗೆ ಎಸೆದಿದ್ದಾನೆ. ಒಂದು ವರ್ಷದ ಶ್ರೇಯಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಂಭುಲಿಂಗಯ್ಯ ಶಾಪೂರಮಠ ಎಂಬ ಪಾಪಿ ತಂದೆ ಮಗುವಿನ ಮೇಲೆ ಕೋಪ ತೋರಿಸಿಕೊಂಡಿದ್ದಾನೆ. ಕುಡಿತದ ನಶೆಯಲ್ಲಿದ್ದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -spot_img

More articles

- Advertisement -spot_img

Latest article