No menu items!
19.8 C
Munich
Friday, April 17, 2026

ಶಿವಾಜಿನಗರದ BMTC ನಿಲ್ದಾಣದ ಬೀಮ್ ಪಿಲ್ಲರ್ ನಲ್ಲಿ ಬಿರುಕು.. ಜನರಲ್ಲಿ ಆತಂಕ..!

Must read

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಶಿವಾಜಿನಗರದ ಬಿಎಂಟಿಸಿ ನಿಲ್ದಾಣದಲ್ಲಿ ಬಿರುಕು ಕಾಣಿಸಿಕೊಂಡಿದೆ. ನಿಲ್ದಾಣದ ಬೀಮ್ ಪಿಲ್ಲರ್ ನಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಆತಂಕ ಎದುರಾಗಿದೆ.

ಶಿವಾಜಿನಗರದ ಬಸ್​ ನಿಲ್ದಾಣ ನಗರದ ಹಳೆಯ ಸಾರ್ವಜನಿಕ ಬಸ್​ ನಿಲ್ದಾಣಗಳಲ್ಲೊಂದು. ಇದೀಗ ಈ ಬಸ್ ನಿಲ್ದಾಣದ ಬೀಮ್ ಪಿಲ್ಲರ್​ ಗಳಲ್ಲಿ ಅಪಾಯಕಾರಿ ಎನ್ನುವಂತ ಬಿರುಕು ಕಾಣಿಸಿಕೊಂಡಿದೆ. ಇದರ ಕೆಳಗೆಯೇ ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು ದಿನ ನಿತ್ಯ ಓಡಾಡುತ್ತಾರೆ. ನೂರಾರು ಬಿಎಂಟಿಸಿ ಬಸ್​ ಗಳು ಬಂದು ನಿಲ್ಲುತ್ತವೆ. ಹೀಗಾಗಿ ಇದು ಭೀತಿ ಹುಟ್ಟಿಸಿದೆ. ಈ ಬಸ್ ನಿಲ್ದಾಣದ ಪ್ಲಾಟ್​ ಫಾರ್ಮ್ 3, 7 ಹಾಗೂ 11ರ ವರೆಗೆ ಉದ್ದವಾಗಿ ಪಿಲ್ಲರ್ ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಕೆಳಭಾಗದಲ್ಲಿ ಬಸ್​​​ ನಿಲ್ದಾಣ ಸೇರಿದಂತೆ ಒಟ್ಟು ನಾಲ್ಕು ಮಹಡಿಯ ಬಸ್ ನಿಲ್ದಾಣವಿದು. ಮೇಲಿನ ಎರಡು ಮಹಡಿಗಳು ಪಾರ್ಕಿಂಗ್ ಹಾಗೂ ನಾಲ್ಕನೇ ಮಹಡಿಯಲ್ಲಿ ಜಿಎಸ್​ಟಿ ಆಯುಕ್ತಾಲಯವಿದೆ. ಇಲ್ಲಿಗೂ ಪ್ರತಿನಿತ್ಯ ಜನರು ಓಡಾಡುತ್ತಾರೆ. ಹೀಗಾಗಿ ಈಗ ಕಾಣಿಸಿಕೊಂಡಿರುವ ಬಿರುಕು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ತಿಂಗಳಿನಿಂದ ಇದೇ ಮಾದರಿಯಲ್ಲಿದೆ ಇದು. ಆದಷ್ಟು ಬೇಗ ಇದಕ್ಕೊಂದು ಪರಿಹಾರ ಒದಗಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ

ಶಿವಾಜಿನಗರದ ಬಸ್ ನಿಲ್ದಾಣಕ್ಕೆ ಅಂಟಿಕೊಂಡೇ ನಮ್ಮ ಮೆಟ್ರೋ ಕಾಮಗಾರಿಯೂ ನಡೆಯುತ್ತಿದೆ. ಗೊಟ್ಟಿಗೆರೆ ನಾಗವಾರ ಮಾರ್ಗದ ಭೂಗತ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಬಸ್ ನಿಲ್ದಾಣದ ಪಕ್ಕದಲ್ಲೇ ಸುರಂಗ ಮಾರ್ಗ ಹಾಗೂ ಭೂಗತ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಸುರಂಗ ಮಾರ್ಗ ಕೊರೆಯುತ್ತಿರುವುದರಿಂದ ಈ ಬಸ್​ ನಿಲ್ದಾಣದ ಪಿಲ್ಲರ್‌ಗಳಿಗೆ ಧಕ್ಕೆಯಾಗುವ ಆತಂಕವನ್ನೂ ಸಾರ್ವಜನಿಕರು ವ್ಯಕ್ತ ಪಡಿಸುತ್ತಿದ್ದಾರೆ.

ಹೇಳಿ ಕೇಳಿ ಇದು ಮಳೆಗಾಲ ಬೇರೆ. ಬಿರುಗಾಳಿ ಮಳೆಗೆ ಬಾನೆತ್ತರದ ಕಟ್ಟಗಳು ಬೆಂಗಳೂರಲ್ಲಿ ಕ್ಷಣ ಮಾತ್ರದಲ್ಲಿ ನೆಲಸಮವಾಗುತ್ತದೆ. ಇದರ ಜೊತೆಗೆ ನಮ್ಮ ಮೆಟ್ರೋ ಸುರಂಗ ಕಾಮಗಾರಿಯೂ ನಡೆಯುತ್ತಿರುವುದರಿಂದ ಆತಂಕ ಇಮ್ಮಡಿಯಾಗಿಸಿದೆ. ಕಣ್ಣಿಗೆ ರಾಚುವಂತೆ ಇಲ್ಲಿ ಪಿಲ್ಲರ್ ಗಳಲ್ಲಿ ಬಿರುಕು ಮೂಡಿದೆ.

- Advertisement -spot_img

More articles

- Advertisement -spot_img

Latest article