ಪ್ರಪಂಚದಲ್ಲಿ ಇಂತಹ ಮಹಿಳೆಯರೂ ಇರ್ತಾರಾ..? ಅನ್ನೋದಕ್ಕೆ ಈ ಘಟನೆಯೇ ಸೂಕ್ತ ನಿದರ್ಶನ ಅನ್ಬೋದೇನೋ..! ಪರ ಪುರುಷರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ ಪತ್ನಿಯನ್ನು ಕಂಡು ಅದನ್ನು ಪ್ರಶ್ನೆ ಮಾಡಿದಕ್ಕೇ ಪತಿಯ ನಾಲಿಗೆಯನ್ನು ಕತ್ತರಿಸಿದ ಧಾರುಣ ಘಟನೆಯೊಂದು ವರದಿಯಾಗಿದೆ ನೋಡಿ.. ಕೂಲಿ ಕಾರ್ಮಿಕನಾಗಿದ್ದ ಧರ್ಮಪುರಿ ನಿವಾಸಿ ಜಿತೇಂದ್ರ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದಾನೆ. ಈ ವೇಳೆ ಮನೆಯಲ್ಲಿ ಪುರುಷರ ಶಬ್ದ ಬರುತ್ತಿರುವುದನ್ನು ಕೇಳಿ ದಂಗಾದ ಆತ ಕಿಟಿಕಿಯಿಂದ ಮನೆಯೊಳಗೆ ನಡೆಯುತ್ತಿದ್ದ ದೃಶ್ಯವನ್ನು ಕಂಡು ಕೆಂಡಾಮಂಡಲನಾಗಿದ್ದಾನೆ. ತನ್ನ ಪತ್ನಿ ಇಬ್ಬರು ಪುರುಷರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದನ್ನು ಕಂಡು ಪತ್ನಿಯನ್ನು ಅಲ್ಲೇ ಚಚ್ಚಬೇಕು ಎನ್ನುವಷ್ಟರಲ್ಲಿ ಆಕೆಯ ಇಬ್ಬರು ಪ್ರಿಯಕರರು ಜಿತೇಂದ್ರ ಅವರ ಮೇಲೆ ದಾಳಿ ಮಾಡಿದ್ದಾರೆ..! ಇಲ್ಲಿ ನಡೆದ ಘಟನೆಯನ್ನು ಯಾರಿಗಾದರೂ ಹೇಳಿದ್ದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ ಅವರು ತನ್ನ ಪತಿ ಎಂಬ ಕಿಂಚಿತ್ತೂ ಕರುಣೆ ತೋರದೆ ಆತನ ನಾಲಿಗೆಯನ್ನು ಕತ್ತರಿಸಿ ಮೂವರೂ ಅಲ್ಲಿಂದ ಪರಾರಿಯಾಗಿದ್ದಾರೆ. ತನ್ನ ಅರ್ಧ ಕತ್ತರಿಸಿದ ನಾಲಿಗೆಯನ್ನು ತೆಗೆದುಕೊಂಡ ಜಿತೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಇಬ್ಬರು ಪ್ರಿಯಕರರ ವಿರುದ್ದ ದೂರು ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ..
POPULAR STORIES :
ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ನಂ.1 ಬೌಲರ್..!
60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!
ಕಾಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ಸಿನಿಮೀಯ ರೀತಿಯಲ್ಲಿ ಬಡಿದಾಟ..!
ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!