ಪ್ರೇಯಸಿಯೊಂದಿಗೆ ಬ್ರೇಕಪ್; ಮನನೊಂದು ಯುವಕ ಆತ್ಮಹತ್ಯೆ
ಬೆಂಗಳೂರು: ಪ್ರೇಯಸಿ ಬೇರ್ಪಟ್ಟಿದ್ದಕ್ಕೆ ಬೇಸತ್ತು ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸತೀಶ್ ಕುಮಾರ್(25) ಮೃತ ಯುವಕ ಎಂದು ಗುರುತಿಸಲಾಗಿದೆ. ಕಾಲೇಜಿನಲ್ಲಿದ್ದಗಿನಿಂದ ಯುವತಿಯೋರ್ವಳನ್ನ ಪ್ರೀತಿಸುತ್ತಿದ್ದನು. ಇಬ್ಬರು ಪರಸ್ಪರ ಪ್ರೀತಿಸಿ ಒಟ್ಟಿಗೆ ಓಡಾಡಿದ್ರು. ಆದ್ರೆ ಯುವತಿ ಸತೀಶ್ ಜೊತೆ ಮಾತನಾಡುವುದನ್ನು ನಿಲ್ಲಿಸಿ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ನೊಂದ ಆತ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.