ಚಳಿಗಾಲದಲ್ಲಿ ಮೊಸರು ತಿನ್ನಬಹುದೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
ದ್ರವ ಪದಾರ್ಥಗಳು ನಮ್ಮ ದೇಹದಲ್ಲಿ ಬಹಳ ಬೇಗ ಜೀರ್ಣವಾಗುತ್ತದೆ. ದಕ್ಷಿಣ ಭಾರತೀಯರಿಗೆ ಊಟದಲ್ಲಿ ಮೊಸರು ಬೇಕೇ ಬೇಕು. ಕೊನೆಯಲ್ಲಿ ಮೊಸರನ್ನ ತಿನ್ನದಿದ್ದರೆ ಅದೆಷ್ಟೋ ಜನರಿಗೆ ತೃಪ್ತಿಯೇ ಆಗುವುದಿಲ್ಲ. ಆದರೆ, ಎಲ್ಲ ಸಮಯದಲ್ಲೂ ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಇದೆಲ್ಲವೂ ಬೇಸಿಗೆ ಕಾಲದಲ್ಲಿ ಚೆನ್ನ ಮಳೆಗಾಲ ಅಥವಾ ಚಳಿಗಾಲದಲ್ಲಿ ಬೇಡ ಎಂದು ಕೆಲವರು ತಾಕೀತು ಮಾಡುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಮೊಸರು ಸೇವನೆ ಮಾಡುವುದು ಬೇಡವೇ? ಆರೋಗ್ಯ ತಜ್ಞರು ಏನು ಹೇಳುತ್ತಾರೆ. ತಿಳಿಯೋಣ ಬನ್ನಿ.
ಚಳಿಗಾಲದಲ್ಲಿ ಮೊಸರು ಆರೋಗ್ಯಕ್ಕೆ ಒಳ್ಳೆಯದಲ್ಲ!
ಚಳಿಗಾಲದಲ್ಲಿ ಮೊಸರು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ನಮ್ಮ ಉಸಿರಾಟ ಪ್ರಕ್ರಿಯೆಯಲ್ಲಿ ತೊಂದರೆ ಕೊಡುವ ಸಾಧ್ಯತೆ ಇದೆ.
ಮುಖ್ಯವಾಗಿ ಎದೆಯ ಹಾಗೂ ಶ್ವಾಸಕೋಶದ ಭಾಗದಲ್ಲಿ ಕಫದ ಉತ್ಪತ್ತಿಗೆ ದಾರಿ ಮಾಡಿಕೊಡುತ್ತದೆ. ಶ್ವಾಸಕೋಶದ ಹಲವು ಸಮಸ್ಯೆಗಳು ಕಂಡುಬರಲು ಮೊಸರು ಕಾರಣವಾಗುತ್ತದೆ. ಕೆಮ್ಮು, ಅಲರ್ಜಿ ಸಮಸ್ಯೆಗಳು ಕೂಡ ರಾತ್ರಿಯ ಸಮಯದಲ್ಲಿ ಮೊಸರು ಸೇವನೆಯಿಂದ ಉಂಟಾಗಬಹುದು.
ಮೊಸರು ತನ್ನಲ್ಲಿ ಅಪಾರ ಪ್ರಮಾಣದ ಅತ್ಯುತ್ತಮ ಬ್ಯಾಕ್ಟೀರಿಯಗಳನ್ನು ಒಳಗೊಂಡಿರುತ್ತದೆ. ಕರುಳಿನ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ಜೊತೆಗೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಮೊಸರಿನಲ್ಲಿ ಕಂಡುಬರುತ್ತದೆ.
ಇದರಲ್ಲಿ ವಿಟಮಿನ್ ಅಂಶಗಳು, ಕ್ಯಾಲ್ಸಿಯಂ ಅಂಶ ಮತ್ತು ಫಾಸ್ಪರಸ್ ಅಂಶಗಳ ಪ್ರಮಾಣ ಹೆಚ್ಚಾಗಿದೆ. ಚಳಿಗಾಲದ ಸಂದರ್ಭದಲ್ಲಿ ಮೊಸರು ಸೇವನೆ ಮಾಡುವುದರಿಂದ ಅತ್ಯುತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಆದರೆ ಯಾರಿಗೆ ಉಸಿರಾಟದ ತೊಂದರೆ ಇರುತ್ತದೆ ಅಂತಹವರು ಸಂಜೆ 5 ಗಂಟೆಯ ನಂತರ ಮೊಸರು ಸೇವನೆ ಮಾಡುವುದು ಬೇಡ. ಆಸ್ತಮಾ ಮತ್ತು ಅಲರ್ಜಿ ಸಮಸ್ಯೆ ಇರುವ ಜನರಿಗೂ ಕೂಡ ಇದು ಅನ್ವಯವಾಗುತ್ತದೆ.