No menu items!
17.6 C
Munich
Wednesday, April 29, 2026

ಕಟೀಲು ದೇವಿ ವಿರುದ್ದ ಅವಹೇಳನ: ಫೇಸ್‍ಬುಕ್‍ ವಿರುದ್ದ ದೂರು ದಾಖಲು..!

Must read

ಫೇಸ್‍ಬುಕ್‍ನಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದ ಕುರಿತಂತೆ ಫೇಸ್‍ಬುಕ್‍ ವಿರುದ್ದ ದೂರು ದಾಖಲಾಗಿದೆ. ಕಟೀಲು ದೇವಿಯ ವಿರುದ್ದ ಫೇಸ್‍ಬುಕ್‍ನಲ್ಲಿ ಅವಹೇಳಕಾರಿ ಸಂದೇಶಗಳು ರವಾನೆಯಾಗಿದ್ದು ಈ ಕುರಿತು ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿದ ಫೆಸ್‍ಬುಕ್ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ. ಅವಹೇಳನಕಾರಿ ಸಂದೇಶದ ಕುರಿತಾಗಿ ಫೇಸ್‍ಬುಕ್‍ಗೆ ಮೂರು ಬಾರಿ ಪತ್ರ ಬರೆದಿದ್ದರೂ ಅವುಗಳಿಗೆ ಯಾವುದೆ ಪ್ರತ್ಯುತ್ತರ ನೀಡಿಲ್ಲ. ಈ ಕಾರಣದಿಂದಾಗಿ ಮುಂಬೈನ ಬಾಂದ್ರಾದಲ್ಲಿರುವ ಫೆಸ್ಬುಕ್ ಕಛೇರಿಯ ಲೀಗಲ್ ಸೆಲ್ ಅಸಿಸ್ಟೆಂಟ್ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಟೀಲು ದೇವಿಯ ಕುರಿತು ಫೆಸ್‍ಬುಕ್‍ನಲ್ಲಿ ಅವಹೇಳನಕಾರಿ ಸಂದೇಶಗಳು ಹರಿದಾಡುತ್ತಿದ್ದ ಹಿನ್ನಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಆದೇಶದಂತೆ ಎಸಿಪಿ ಉದಯ್‍ನಾಯಕ್ ಅವರ ಮಾರ್ಗದರ್ಶನದಲ್ಲಿ ಬಂದರು ಪೊಲೀಸ್ ನಿರೀಕ್ಷಕ ಶಾಂತರಾಮ್ ಅವರು ಮಾಹಿತಿ ಕೋರಿ ಕಳೆದ ಬಾರಿ 3 ಪತ್ರ ಬರೆದಿದ್ದರು. ಆದರೆ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರು ಫೇಸ್‍ಬುಕ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Like us on Facebook  The New India Times

POPULAR  STORIES :

ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article