ಕ್ಯಾಪ್ಸಿಕಂ ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

Date:

ಕ್ಯಾಪ್ಸಿಕಂ ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

 

ವಿವಿಧ ಬಣ್ಣಗಳಲ್ಲಿ ದೊರೆಯುವ ಕ್ಯಾಪ್ಸಿಕಂ ಅಥವಾ ದೊಡ್ಡ ಮೆಣಸಿನಕಾಯಿ ವಿವಿಧ ತರಕಾರಿಗಳ ಜೊತೆಗೆ, ಅಡುಗೆಗಳಲ್ಲಿ ಬಳಸುವುದರಿಂದ, ಅಡುಗೆಯ ಸ್ವಾದ ಹೆಚ್ಚಾಗುವುದು ಮಾತ್ರವಲ್ಲದೆ, ಸಂಧಿವಾತ, ಮಧುಮೇಹ, ಹೃದಯಕ್ಕೆ ಸಂಬಂಧ ಪಟ್ಟ ದೀರ್ಘಕಾಲದ ಕಾಯಿಲೆ ಗಳನ್ನು ತಡೆಯುತ್ತದೆ. ಬನ್ನಿ ಇಂದಿನ ಲೇಖನಲ್ಲಿ ಆರೋಗ್ಯ ವೃದ್ಧಿಸುವ ಈ ಕ್ಯಾಪ್ಸಿಕಂನಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಅಡಗಿವೆ ಎನ್ನುವುದರ ಬಗ್ಗೆ ನೋಡೋಣ..

ಕ್ಯಾಪ್ಸಿಕಂ ತಿನ್ನುವುದರಿಂದಾಗುವ ಪ್ರಯೋಜನಗಳು

ಕ್ಯಾಪ್ಸಿಕಂನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದಿಂದ ರಕ್ಷಿಸುವ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಗ್ಯಾಸ್ಟ್ರಿಕ್ ಸಮಸ್ಯೆ, ಕ್ಯಾನ್ಸರ್ ಅದರಲ್ಲೂ ಮುಖ್ಯವಾಗಿ ಅನ್ನನಾಳದ ಕ್ಯಾನ್ಸರ್, ಪ್ರಾಸ್ಟೇಟ್, ಗುಳ್ಳೆ, ಗರ್ಭ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತಾರೆ.
ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಾಲಜನ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಕ್ಯಾಪ್ಸಿಕಂ ಸಂಧಿವಾತದ ಅಪಾಯವನ್ನು ಕಡಿಮೆ ಮಾಡುವುದರ ಜತೆಗೆ, ಜೀವಕೋಶಗಳನ್ನು ಆಕ್ಸಿಡೀಕರಣದ ಅಪಾಯದಿಂದ ರಕ್ಷಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ಕ್ಯಾಪ್ಸಿಕಂನಲ್ಲಿ ಲೈಕೋಪೀನ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕ್ಯಾಪ್ಸಿಕಂ ಹೃದಯವನ್ನು ಆರೋಗ್ಯವಾಗಿರಿಸುವುದರ ಜತೆಗೆ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.
ಕ್ಯಾಪ್ಸಿಕಂ ಜ್ಯೂಸ್ ಜಠರ ಮತ್ತು ಕರುಳಿನ ಕಾಯಿಲೆಗಳಾದ ಡಿಸ್ಪೆಪ್ಸಿಯಾ, ಅತಿಸಾರ ಮತ್ತು ಹುಣ್ಣುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಕ್ಯಾಪ್ಸಿಕಂ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಕ್ಯಾಪ್ಸಿಕಂ ಡೈಹೈಡ್ರೊ ಟೆಸ್ಟೋಸ್ಟೆರಾನ್ ಪರಿಣಾಮಗಳಿಂದ ಕೂದಲಿನ ಉದುರುವಿಕೆಯನ್ನು ನಿಯಂತ್ರಿಸುತ್ತದೆ.
ಕ್ಯಾಪ್ಸಿಕಂನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಅಧಿಕವಾಗಿರುತ್ತದೆ. ಇದು ಕಣ್ಣುಗಳ ದೃಷ್ಟಿ ಹೀನತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ವಯಸ್ಸಾದಂತೆ ಉಂಟಾಗುವ ದೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ನಿಯಂತ್ರಿಸುತ್ತದೆ.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...