No menu items!
15.2 C
Munich
Sunday, May 24, 2026

ಕೊಟ್ಟೂರು ಗುರುಬಸವೇಶ್ವರ ತೇರಿನ ಸ್ಟೇರಿಂಗ್ ಕಟ್: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಭಕ್ತರು ಪಾರು!

Must read

ಕೊಟ್ಟೂರು ಗುರುಬಸವೇಶ್ವರ ತೇರಿನ ಸ್ಟೇರಿಂಗ್ ಕಟ್: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಭಕ್ತರು ಪಾರು!

ಬಳ್ಳಾರಿ:- ಕೊಟ್ಟೂರು ಗುರುಬಸವೇಶ್ವರ ತೇರಿನ ಸ್ಟೇರಿಂಗ್ ಕಟ್ ಆದ ಹಿನ್ನೆಲೆ ಕೂದಲೆಳೆ ಅಂತರದಲ್ಲಿ ಭಕ್ತರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ಜರುಗಿದೆ.

ನಿನ್ನೆ ಸಂಜೆ ಗುರುಬಸವೇಶ್ವರ ತೇರನ್ನು ಹೊರತೆಗೆಯುವಾಗ ಅದರೊಳಗಿನ ಸ್ಟೇರಿಂಗ್ ಕೈ ಕೊಟ್ಟಿತ್ತು. ಹೀಗಾಗಿ ರಥವನ್ನು ಜೋರಾಗಿ ಎಳೆಯಲಾಗಿದೆ. ಜೋರಾಗಿ ಎಳೆದ ಪರಿಣಾಮ ಬೃಹತ್ ಗಾತ್ರದ ತೇರು ರಭಸವಾಗಿ ಕೆಳಗೆ ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಭಕ್ತರು ಪಕ್ಕಕ್ಕೆ ಸರಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದೆ.

ರಥದ ಗಾಲಿಗಳ ನಿರ್ವಹಣೆ ಮಾಡುವವರ ಸಮಯ ಪ್ರಜ್ಞೆಯಿಂದ ಜನರನ್ನ ಬದಿಗೆ ಸರಿಸಲು ಕಾರಣವಾಯಿತು. ಆದರೆ ರಸ್ತೆ ಬದಿಗೆ ನಿಂತಿದ್ದ ಸ್ಕೂಟಿ ಹಾಗೂ ಬೈಕ್‌ಗಳು ರಥದಡಿಗೆ ಸಿಲುಕಿ ಅಪ್ಪಚ್ಚಿಯಾಗಿವೆ ಎಂದು ತಿಳಿದು ಬಂದಿದೆ.

- Advertisement -spot_img

More articles

- Advertisement -spot_img

Latest article