No menu items!
25.8 C
Munich
Sunday, July 26, 2026

Crime News: ನಡು ರಸ್ತೆಯಲ್ಲಿ ವ್ಯಕ್ತಿ ಬರ್ಬರ ಕೊಲೆ – ದುಷ್ಕರ್ಮಿಗಳು ಎಸ್ಕೇಪ್!

Must read

ಬಳ್ಳಾರಿ:- ಬಳ್ಳಾರಿಯ ಕಣೇಕಲ ರಸ್ತೆಯ ರಾಣಿತೋಟ ಏರಿಯಾದಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.

ವೆಂಕಟೇಶ ಗೊಲ್ಲರ್ ಕೊಲೆಗೀಡಾದ ವ್ಯಕ್ತಿ ಎನ್ನಸಲಾಗಿದೆ. ಇಲ್ಲಿನ ರಾಣಿತೋಟದ ಜುಮ್ಮಾಮಸೀದಿ ಮುಂಭಾಗದಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಮೃತ ವ್ಯಕ್ತಿಯು, ಆರ್ ಜೆ ಕಾಟನ್ ಮಿಲ್ ಇಂಡಸ್ಟ್ರಿನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಇದೀಗ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎನ್ನಸಲಾಗಿದೆ.

- Advertisement -spot_img

More articles

- Advertisement -spot_img

Latest article