No menu items!
10.3 C
Munich
Saturday, September 12, 2026

ಪೈಶಾಚಿಕ ಕೃತ್ಯ; 16 ವರ್ಷದ ಮಗಳ ಮೇಲೆ ನಿರಂತರ ರೇಪ್, ಕಾಮುಕ ತಂದೆ ಅರೆಸ್ಟ್!

Must read

ಗದಗ:- ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮಗಳ ಮೇಲೆ ಪಾಪಿ ತಂದೆಯೋರ್ವ ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿರುವ ಘಟನೆ ಜರುಗಿದೆ.

16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸುಮಾರು 55 ವರ್ಷದ ತಂದೆಯಿಂದ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ.

ಆರೋಪಿ ತಂದೆ ರಮೇಶ್ ಮೇಲೆ‌ ಈಗ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿ ಆಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಮನೆಯಲ್ಲಿ ಯಾರು ಇಲ್ಲದ ವೇಳೆ ಅತ್ಯಾಚಾರ ನಡೆಸುತ್ತಿದ್ದ. ಅತ್ಯಾಚಾರ ನಂತರ ಯಾರಿಗೂ ಹೇಳದಂತೆ ಹೆದರಿಕೆ ಹಾಕುತ್ತಿದ್ದ. ಅಕಸ್ಮಾತ್ ಯಾರ ಮುಂದಾದ್ರು ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪ ಸಂತ್ರಸ್ತೆ ಬಾಲಕಿಯದ್ದಾಗಿದೆ. ಸದ್ಯ ಆರೋಪಿ ತಂದೆ ರಮೇಶ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

- Advertisement -spot_img

More articles

- Advertisement -spot_img

Latest article