ನಾನು ರಾಜೀನಾಮೆ ಕೊಟ್ಟಿದ್ದೀನಿ, ಯತ್ನಾಳ್ ಕೊಡಬೇಕಷ್ಟೆ: ಶಿವಾನಂದ ಪಾಟೀಲ್!

Date:

ಬೆಂಗಳೂರು:- ನಾನು ರಾಜೀನಾಮೆ ಕೊಟ್ಟಿದ್ದೀನಿ, ಯತ್ನಾಳ್ ಕೊಡಲಿ, ನೇರ-ನೇರ ಸ್ಪರ್ಧೆಗೆ ಸಿದ್ಧ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್‌ ಡೆಡ್‌ಲೈನ್‌ ಫಿಕ್ಸ್‌ ಮಾಡಿದ್ದಕ್ಕೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು. ಯತ್ನಾಳ್ ಅವರ ಸವಾಲು ಸ್ವೀಕಾರ ಮಾಡಿ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೂ, ಸಿಎಂಗೂ ಇದು ಸಂಬಂಧಿಸಿಲ್ಲ ಎಂದು ಹೇಳಿದರು.

ಡೆಡ್ ಲೈನ್ ಫಿಕ್ಸ್ ಮಾಡಿದ್ದು ಯತ್ನಾಳ್‌. ಶುಕ್ರವಾರದೊಳಗೆ ರಾಜೀನಾಮೆ ಕೊಡದಿದ್ದರೆ ಅವರಪ್ಪನಿಗೆ ಹುಟ್ಟಿಲ್ಲ ಎಂದಿದ್ದರು. ಅದಕ್ಕೆ ಈಗ ನಾನು ರಾಜೀನಾಮೆ ನೀಡಿದ್ದೇನೆ. ಹೀಗಾಗಿ ಯತ್ನಾಳ್ ಕೂಡ ರಾಜೀನಾಮೆ ಕೊಡಲಿ. ವಿಜಯಪುರದಲ್ಲಾದ್ರೂ ಸರಿ, ಬಸವನಬಾಗೇವಾಡಿಯಲ್ಲಾದ್ರೂ ಸರಿ ಅವರ ಎದುರು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

ಯತ್ನಾಳ್ ಅವರ ತಂದೆ ತಾಯಿಗಳಿಗೆ ಹುಟ್ಟಿದ್ದಾರೆ. ನಾನು ಆ ಮಾತುಗಳನ್ನ ಆಡಲ್ಲ. ಆದರೆ ನನ್ನ ಪೂರ್ವಜರ ಬಗ್ಗೆ ಪಾಟೀಲ್ ಹೆಸರಿನ ಬಗ್ಗೆ ಮಾತನಾಡಿದ್ದಕ್ಕೆ ನೋವಾಗಿದೆ ಎಂದು ಬೇಸರ ಹೊರ ಹಾಕಿದರು.

Share post:

Subscribe

spot_imgspot_img

Popular

More like this
Related

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು:...

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್!

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್! ಚಿಕ್ಕಬಳ್ಳಾಪುರ: ನಂದಿನಿ ಹಾಲು...

ಕೊಲೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್ಐಆರ್

ಕೊಲೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ...

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರು ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...