ಹುಬ್ಬಳ್ಳಿಯಲ್ಲಿ ಗ್ರಾಮದ 11 ತಿಂಗಳ ಮಗುವಿಗೆ ಕೊರೊನಾ ಸೋಂಕು! ಹೆಚ್ಚಿದ ಆತಂಕ
ಹುಬ್ಬಳ್ಳಿ: ರಾಜ್ಯದಲ್ಲಿ ಮಳೆ ನಡುವೆ ಕೊರೊನಾ ಕ್ರಿಮಿಯ ಅಬ್ಬರ ಜೋರಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಕಾಣಿಸಿಕೊಂಡಿದೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪ ಗ್ರಾಮದ 11 ತಿಂಗಳ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಹೋದಾಗ ಕೋವಿಡ್ ಇರೋದು ಪತ್ತೆಯಾಗಿದೆ.
ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದೆ ಅಂತ ಧಾರವಾಡ ಜಿಲ್ಲಾಡಳಿತ ಮಾಹಿತಿ ನೀಡಿದೆ. ದೇಶದ ಹಲವು ರಾಜ್ಯದಲ್ಲೂ ಸೋಂಕಿನ ಸಂಖ್ಯೆ ಹೆಚ್ಚು ಆಗುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ. ರಾಜ್ಯದ ಒಟ್ಟು ಆಕ್ಟೀವ್ ಕೇಸ್ 234 ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 150ಕ್ಕೂ ಹೆಚ್ಚು ಆಕ್ಟೀವ್ ಕೇಸ್ಗಳು ದಾಖಲಾಗಿದೆ. ಬೆಂಗಳೂರು ಮತ್ತೆ ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆ.