No menu items!
11.9 C
Munich
Thursday, April 30, 2026

ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ: ರೆಡ್ ಅಲರ್ಟ್ ಘೋಷಣೆ

Must read

ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ: ರೆಡ್ ಅಲರ್ಟ್ ಘೋಷಣೆ

 

ಬೆಂಗಳೂರು: ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಕಳೆದ 24 ಗಂಟೆಯಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗ್ತಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು, ಹಾಸನ, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಧಾರವಾಡ, ಹಾವೇರಿ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ನಲ್ಲಿ ಮಳೆಯಾಗಲಿದೆ.

ಮಂಕಿ, ಸಿದ್ದಾಪುರ, ಮಂಗಳೂರು, ಆಗುಂಬೆ, ಕೊಟ್ಟಿಗೆಹಾರ, ಕ್ಯಾಸಲ್ರಾಕ್, ಪಣಂಬೂರು, ಗೇರುಸೊಪ್ಪ, ಕುಂದಾಪುರ, ಉಪ್ಪಿನಂಗಡಿ, ಕದ್ರಾ, ಬಂಟವಾಳ, ಕೋಟಾ, ಹೊನ್ನಾವರ, ಕುಮಟಾ, ಧರ್ಮಸ್ಥಳ, ಮಾಣಿ, ಪುತ್ತೂರು, ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮುಲ್ಕಿ, ಉಡುಪಿ, ಅಂಕೋಲಾ, ಯಲ್ಲಾಪುರ, ಶೃಂಗೇರಿ, ಕಳಸ, ಸುಳ್ಯ, ಜೋಯ್ಡಾ, ಕಿತ್ತೂರು, ಖಾನಾಪುರ, ಹುಂಚದಕಟ್ಟೆಯಲ್ಲಿ ಕೂಡ ಮಳೆಯಾಗಿದೆ.

- Advertisement -spot_img

More articles

- Advertisement -spot_img

Latest article