ಮಾಸ್ತಿಗುಡಿ ಶೂಟಿಂಗ್ ವೇಳೆ ಅನಿಲ್,ಉದಯ್ ಸಾವು..!!

Must read

ಸುಮಾರು 100 ಅಡಿ ಎತ್ತರದಿಂದ ಹೆಲಿಕ್ಯಾಪ್ಟರ್‍ನಿಂದ ನೀರಿಗೆ ಹಾರಿದ ಇಬ್ಬರು ಖಳನಾಯಕರು ನೀರಿನಿಂದ ಹೊರಕ್ಕೆ ಬಾರದೆ ಸಾವನ್ನಪ್ಪಿದ ಘಟನೆಯೊಂದು ತಿಪ್ಪಗೊಂಡನಹಳ್ಳಿ ಕೆರೆ ಬಳಿ ಸಂಭವಿಸಿದೆ. ಕೆರೆಯ ಬಳಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು ದುನಿಯಾ ವಿಜಯ್ ಅವರೊಂದಿಗೆ ನೀರಿಗೆ ಹಾರಿದ ಉದಯ್ ಹಾಗೂ ಅನಿಲ್ ನೀರಿನಿಂದ ಹೊರ ಬಾರದೇ ಸಾವನ್ನಪ್ಪಿದ್ದಾರೆ..! ಕೆರೆಗೆ ಹಾರಿದ ವಿಜಯ್ ಬಿಟ್ಟರೆ ಇನ್ನಿಬ್ಬರು ಸಹ ಕಲಾವಿದರು ದಡ ಸೇರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ 2:40ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಇಬ್ಬರು ಕಲಾವಿಧರ ಮೃತದೇಹಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ.
ನನಗೆ ಈಜು ಬರೊಲ್ಲ: ಉದಯ್
ಚಿತ್ರೀಕರಣಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮೃತ ಉದಯ್ ತನಗೆ ಈಜು ಬರೋದಿಲ್ಲ ಎಂಬ ವಾಸ್ತವ ಸಂಗತಿಯನ್ನು ಬಿಚ್ಚಿಟ್ಟರು. ಅಲ್ಲದೇ ಶೂಟಿಂಗ್‍ನಲ್ಲಿ ತನಗೆ ತೀವ್ರ ಜ್ವರ ಇತ್ತು ಎಂದು ಹೇಳಿದ್ದರು. ಈಜು ಬರೋದಿಲ್ಲ ಎಂದು ಹೇಳಿದ್ದರೂ ಕೂಡ ಸ್ಟೆಂಟ್ ಮಾಡಲು ಒತ್ತಾಯ ಮಾಡಿದ್ದರು.. ಏನೇ ತೊಂದರೆ ಆದ್ರೂ ನಾವಿದ್ದೇವೆ ಎಂದು ಚಿತ್ರ ತಂಡ ಹೇಳಿದ್ರು ಎಂದು ಮಾಧ್ಯಮ ಮುಂದೆ ಹೇಳಿಕೆ ನೀಡಿದ್ದರು. ಆದ್ರೆ ಈಗ ಇಬ್ಬರೂ ಇನ್ನಿಲ್ಲದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ..!

https://www.youtube.com/watch?v=gHGKgNY59dw

Like us on Facebook  The New India Times

POPULAR  STORIES :

ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

- Advertisement -spot_img

More articles

- Advertisement -spot_img

Latest article