No menu items!
3.1 C
Munich
Thursday, April 30, 2026

2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!

Must read

ಕಳೆದೆರಡು ದಿನಗಳ ಹಿಂದೆ ಕಪ್ಪು ಹಣ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಬ್ಯಾಂಕ್ ಠೇವಣಿಗಳ ಮೇಲೆ ಕೇಂದ್ರ ಕಣ್ಣಿಟ್ಟಿದೆ..!
ಇಂದಿನಿಂದ ಎಲ್ಲಾ ಬ್ಯಾಂಕ್‍ಗಳು ಆರಂಭವಾಗಲಿದ್ದು, ಬ್ಯಾಂಕ್‍ಗಳಿಗೆ ನೋಟು ಬದಲಾವಣೆ ಮಾಡಲು ಜನರು ತಂಡೋಪ ತಂಡವಾಗಿ ಬಂದಿದ್ದು, ಇದೇ ವೇಳೆ ಕೇಂದ್ರ ಸರ್ಕಾರ ಕಾಳಧನಿಕರ ಮೇಲೆ ಗಾಣ ಬೀಸಲು ಆರಂಭಿಸಿದೆ. ಇದೇ ಕಾರಣದಿಂದಾಗಿ ಇಂದಿನಿಂದ ಬ್ಯಾಂಕ್‍ಗಳಿಗೆ ಬರುವ ಗ್ರಾಹಕರ ಠೇವಣಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದಕ್ಕಾಗಿ ಹಣಕಾಸು ಸಚಿವಾಲಯ ಅಕ್ರಮ ಹಣ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಿ ಮತ್ತು ದಂಡ ವಿಧಿಸುವಂತೆ ಸೂಚನೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆದಾಯ ತೆರಿಗೆ ಅಧಿಕಾರಿಗಳು ಈಗಾಗಲೇ ಹೊಸ ನೋಟು ಚಲಾವಣೆ ಕಾರ್ಯ ಆರಂಭವಾಗಿದ್ದು ಎಲ್ಲಾ ಗ್ರಾಹಕರ ಠೇವಣಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಒಂದು ವೇಳೆ ಗ್ರಾಹಕರ ಖಾತೆಯಲ್ಲಿ ವ್ಯತ್ಯಾಸ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಮೂಲಗಳು ತಿಳಿಸುವಂತೆ ಯಾವುದೇ ಖಾತೆಗಳಲ್ಲಿ 2.5 ಲಕ್ಷಕ್ಕಿಂತ ಅಧಿಕ ಹಣ ಠೇವಣಿಯಾಗಿದ್ದರೆ ಆ ಹಣಕ್ಕೆ ತೆರಿಗೆ ವಿಧಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಅಲ್ಲದೇ ಗ್ರಾಹಕರು ತಂದಿರುವ ಹಣವು ಅಕ್ರಮ ಎಂದು ಸಾಬೀತಾದ ಪಕ್ಷದಲ್ಲಿ ದಂಡ ವಿಧಿಸುವಂತೆಯೂ ತಿಳಿಸಿದೆ. ಪ್ರತಿಯೊಂದು ಠೇವಣಿಗೂ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‍ಗಳನ್ನು ಪಡೆಯುವಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ. ಕೇವಲ ನಗದು ಮಾತ್ರವಲ್ಲದೇ ಆಭರಣದ ಮೇಲಿನ ಠೇವಣಿಗಳಿಗೂ ಪಾನ್ ಕಾರ್ಡ್ ನಂಬರ್ ಪಡೆಯುವಂತೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ 1.5 ರಿಂದ 2 ಲಕ್ಷದವರೆಗಿನ ಹಣಕ್ಕೆ ತೆರಿಗೆ ವಿನಾಯಿತಿ ನಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Like us on Facebook  The New India Times

POPULAR  STORIES :

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!

12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article