No menu items!
22.1 C
Munich
Thursday, July 23, 2026

ಗುಡ್ ನ್ಯೂಸ್: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ 51.50 ರೂ. ಇಳಿಕೆ!

Must read

ಗುಡ್ ನ್ಯೂಸ್: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ 51.50 ರೂ. ಇಳಿಕೆ!

 

ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯಾಗಿದೆ, ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್‌ ಬೆಲೆ ಇಳಿಕೆ ಮಾಡಲು ನಿರ್ಧರಿಸಿರುವುದರಿಂದ ಜನರಿಗೆ ಸ್ವಲ್ಪ ಮಟ್ಟಿಗೆ ಖುಷಿ ತಂದಿದೆ.19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ  51.50 ರೂ. ಇಳಿಕೆ ಮಾಡಿವೆ. ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರೋದ್ಯಮಗಳಿಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ.

ಪರಿಷ್ಕೃತ ದರಗಳು ಇಂದಿನಿಂದಲೇ ರಿಂದ ಜಾರಿಗೆ ಬಂದಿವೆ. ಪರಿಷ್ಕೃತ ಬೆಲೆಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,580 ರೂ. ಆಗಿದ್ದು, ಪ್ರತಿ ಸಿಲಿಂಡರ್‌ಗೆ 51.50 ರೂ.ಗಳ ಕಡಿತ ಆಗಿದೆ. ಜಾಗತಿಕ ಇಂಧನ ಬೆಲೆ ಮತ್ತು ಇನ್‌ಪುಟ್ ವೆಚ್ಚಗಳಿಗೆ ಸಂಬಂಧಿಸಿದ ನಿಯಮಿತ ಮಾಸಿಕ ಪರಿಷ್ಕರಣೆಗಳ ಭಾಗವಾಗಿ ಈ ದರ ಇಳಿಕೆ ಕಡಿತ ಮಾಡಲಾಗಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

- Advertisement -spot_img

More articles

- Advertisement -spot_img

Latest article