No menu items!
21.9 C
Munich
Tuesday, June 16, 2026

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್

Must read

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್

ಸರಿಗಮಪ ಖ್ಯಾತಿಯ ಸುಹಾನಾ ಸೈಯದ್ ಮಂತ್ರ ಮಾಂಗಲ್ಯ ವಿವಾಹ ಪದ್ಧತಿ ಮೂಲಕ ಬಹುಕಾಲದ ಗೆಳೆಯ, ರಂಗಭೂಮಿ ಕಲಾವಿದ ನಿತಿನ್ ಅವರನ್ನು ಮದುವೆಯಾಗಿದ್ದಾರೆ. ರಂಗಭೂಮಿ ಕಲಾವಿದ ನಿತೀನ್ ಶಿವಾಂಶ್ ಜೊತೆ ಈ ಮದುವೆ ನೆರವೇರಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಅವರು ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ.

ಸುಹಾನಾ ಅವರು ‘ಸರಿಗಮಪ’ ಶೋಗೆ ತೆರಳಿ ಮಿಂಚಿದರು. ಆ ಬಳಿಕ ‘ಶ್ರೀಕೃಷ್ಣನೇ ಶ್ರೀನಿವಾಸನೇ’ ಭಜನೆ ಹೇಳಿದ್ದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಮುಸ್ಲಿಂ ಧರ್ಮದ ಅನೇಕರು ಅವರ ಈ ಕೆಲಸವನ್ನು ಖಂಡಿಸಿದರು. ಈಗ ಅವರು ಗೆಳೆಯ ನಿತೀನ್ ಜೊತೆ ವಿವಾಹ ಆಗಿದ್ದಾರೆ. ಅವರ ಮಂತ್ರ ಮಾಂಗಲ್ಯ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಗಮನ ಸೆಳೆದಿದೆ.

ಸುಹಾನಾ ಹಾಗೂ ನಿತೀನ್ 16 ವರ್ಷಗಳ ಹಿಂದೆ ಪರಿಚಯ ಆದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಈ ಮೊದಲು ಸೋಶೀಯಲ್ ಮೀಡಿಯಾದಲ್ಲಿ ಸುಹಾನಾ ಈ ಬಗ್ಗೆ ಮಾಹಿತಿ ನೀಡಿದ್ದರು. ‘ಪ್ರತಿ ಜೀವವೂ ಪ್ರೀತಿಗಾಗಿ ಹುಡುಕಾಡುತ್ತದೆ. ಪ್ರತಿ ಹೃದಯವು ಪ್ರೀತಿಗಾಗಿ ಹಾತೊರೆಯುತ್ತದೆ.

ಪ್ರೀತಿಗೆ ಯಾವುದೇ ಮಿತಿಯಿಲ್ಲ. ಅದು ದೂರ, ಅನುಮಾನಗಳು ಮತ್ತು ಭಯಗಳನ್ನು ಮೀರಿದ ಪ್ರಯಾಣ. ಆ ಅಪರಿಮಿತ ಪ್ರೀತಿಗೆ ನಾವು ಸಾಕ್ಷಿಗಳಾಗಿ ನಿಲ್ಲುತ್ತೇವೆ. ಇಂದು, ನಾವು ನಮ್ಮ ರಹಸ್ಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಾ ಇದ್ದೇವೆ. ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ’ ಎಂದು ಸುಹಾನಾ ಬರೆದುಕೊಂಡಿದ್ದರು.

- Advertisement -spot_img

More articles

- Advertisement -spot_img

Latest article