No menu items!
12.4 C
Munich
Wednesday, April 29, 2026

ಪವರ್ ಫೈಟ್ ಮಧ್ಯೆ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್

Must read

ಪವರ್ ಫೈಟ್ ಮಧ್ಯೆ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಹಾಗೂ ಬಣ ರಾಜಕೀಯದ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಹೈಕಮಾಂಡ್‌ ಸೂಚನೆಯಂತೆ ಉಪಹಾರ ಸಭೆಯಲ್ಲಿ ಮುಖಾಮುಖಿಯಾಗಿ ಚರ್ಚೆ ನಡೆಸಿದರು.

ಕಳೆದ ಒಂದು ವಾರದಿಂದ ಇಬ್ಬರು ನಾಯಕರ ನಡುವೆ ಉದ್ಭವಿಸಿದ್ದ ಅಧಿಕಾರ ಪೈಪೋಟಿ, ರಾಜಕೀಯ ಒತ್ತಡ ಮತ್ತು ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ನಡೆದ ಈ ಸಭೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

ಮೂಲಗಳ ಪ್ರಕಾರ, ಕಾವೇರಿ ನಿವಾಸದಲ್ಲಿ ನಡೆದ ಸಭೆ ಸುಮಾರು 40 ನಿಮಿಷ ನಡೆಯಿತು. ಪಕ್ಷದ ಒಳ ಗೊಂದಲ ಶಮನ ಹಾಗೂ ಅಧಿಕಾರ ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಹಿಡಿಯುವ ಕುರಿತು ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಸಭೆಯ ನಂತರ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗದಿದ್ದರೂ, ಇಬ್ಬರು ನಾಯಕರ ಒಟ್ಟಿಗೆ ಭೇಟಿ ರಾಜ್ಯ ರಾಜಕೀಯದಲ್ಲಿ ಉದ್ವಿಗ್ನತೆ ಕಡಿಮೆ ಮಾಡುವ ಸೂಚನೆ ಎಂದು ರಾಜಕೀಯ ವಲಯದ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -spot_img

More articles

- Advertisement -spot_img

Latest article