No menu items!
19.6 C
Munich
Friday, May 1, 2026

ಕಾಂಗ್ರೆಸ್ ದುರಾಡಳಿತ ಮಿತಿ ಮೀರಿದೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

Must read

ಕಾಂಗ್ರೆಸ್ ದುರಾಡಳಿತ ಮಿತಿ ಮೀರಿದೆ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿ ಮೀರಿದೆ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಎಂದರೆ ಕಮಿಷನ್, ಕರಪ್ಶನ್, ಲೂಟಿ, ದುಂಡಾವರ್ತಿ ಎಂದು ನಾವು ಹಿಂದೆಯೂ ಹೇಳುತ್ತಿದ್ದೆವು. ಈಗ ಕಾಂಗ್ರೆಸ್ ಮಾನವೀಯ ಮೌಲ್ಯಗಳನ್ನೇ ಗಾಳಿಗೆ ತೂರಿ, ಅಧಿಕಾರವೊಂದಿದ್ದರೆ ಸಾಕು; ಏನು ಬೇಕಾದರೂ ಮಾಡಬಹುದು, ಹೇಗೆ ಬೇಕಾದರೂ ವರ್ತಿಸಬಹುದು ಎಂಬ ದುರ್ನಡತೆಯನ್ನು ಅಳವಡಿಸಿಕೊಂಡಂತೆ ಕಾಣುತ್ತಿದೆ” ಎಂದು ಟೀಕಿಸಿದರು.

ಹೊರದೇಶದಿಂದ ಪ್ರವಾಸಕ್ಕಾಗಿ ಬಂದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಕೇವಲ ರಾಷ್ಟ್ರೀಯ ವಿಷಯವಲ್ಲ, ಅದು ಅಂತರರಾಷ್ಟ್ರೀಯ ಮಟ್ಟದ ಗಂಭೀರ ಪ್ರಕರಣ ಎಂದು ಅವರು ಹೇಳಿದರು. “ಇಂತಹ ಭೀಕರ ಘಟನೆಯನ್ನು ಗೌರವಾನ್ವಿತ ಸಂಸದ ರಾಜಶೇಖರ ಹಿಟ್ನಾಳ್ ಅವರು ಸಣ್ಣ (ಮೈನರ್) ಘಟನೆಯಂತೆ ಮಾತನಾಡಿದ್ದಾರೆ. ಇದರಿಂದಲೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

“ಮಹಿಳೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಣ್ಣ ವಿಷಯವೆಂದು ಯಾರೂ ಭಾವಿಸಬಾರದು. ಇಂತಹ ನೀಚ ಹೇಳಿಕೆಗಳು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಈ ನೀಚತನಕ್ಕೆ ಜನರು ತಕ್ಕ ಉತ್ತರ ನೀಡಬೇಕಿದೆ; ಬುದ್ಧಿ ಕಲಿಸುವ ಕೆಲಸ ಆಗಲೇಬೇಕು” ಎಂದು ಅವರು ಕಿಡಿಕಾರಿದರು.

- Advertisement -spot_img

More articles

- Advertisement -spot_img

Latest article