ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ ಶ್ಲಾಘನೆ

Date:

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ ಶ್ಲಾಘನೆ

ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಸಂಕಲ್ಪವನ್ನು ಸಾಕಾರಗೊಳಿಸುವ ದಿಸೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಕೇಂದ್ರದ ಆಯವ್ಯಯ ಪತ್ರವನ್ನು ವೀಕ್ಷಿಸಿದ ಬಳಿಕ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಕರ್ತವ್ಯಶಕ್ತಿಗಳ ಆಧಾರದ ಮೇಲೆ ಈ ಬಜೆಟ್ ರೂಪಿಸಲಾಗಿದೆ ಎಂದು ತಿಳಿಸಿದರು. ಉತ್ಪಾದನಾ ವೃದ್ಧಿ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ವಿವರಿಸಿದರು.
ಕೈಗಾರಿಕೆ, ಪ್ರವಾಸೋದ್ಯಮ, ಐಟಿ, ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಮಾನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಶಕ್ತಿಗೆ ಪೂರಕವಾದ ಯೋಜನೆಗಳು ಬಜೆಟ್ನಲ್ಲಿ ಒಳಗೊಂಡಿದ್ದು, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು. ಜೊತೆಗೆ ನಾರಿ ಶಕ್ತಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಇನ್ನೂ, ಯಾವುದೇ ಹೊಸ ತೆರಿಗೆ ಹೇರದೇ, ಸರ್ವಸ್ಪರ್ಶಿ ಮತ್ತು ಸರ್ವವ್ಯಾಪ್ತಿಯ ಬಜೆಟ್ ರೂಪಿಸಲಾಗಿದ್ದು, ಎಲ್ಲ ವರ್ಗಗಳು ಹಾಗೂ ಕ್ಷೇತ್ರಗಳಿಗೆ ಸಮಾನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದರು.
ಈ ಬಜೆಟ್ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಭಾರತವನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸುವ ಜೊತೆಗೆ ಭಾರತವನ್ನು ವಿಶ್ವಗುರು ಮಾಡುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಎಂದು ಅವರು ಶ್ಲಾಘಿಸಿದರು.

Share post:

Subscribe

spot_imgspot_img

Popular

More like this
Related

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ ಹುಬ್ಬಳ್ಳಿ: ಮಧ್ಯಪ್ರಾಚ್ಯದಲ್ಲಿ...

ಭೀಕರ ಅಪಘಾತ: KSRTC ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು!

ಭೀಕರ ಅಪಘಾತ: KSRTC ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು! ದೊಡ್ಡಬಳ್ಳಾಪುರ:...

ಬಾಯಿಯ ದುರ್ವಾಸನೆ ಕಾಡುತ್ತಿದೆಯೇ? ಈ ಸುಲಭ ಸಲಹೆಗಳು ನಿಮಗಾಗಿ!

ಬಾಯಿಯ ದುರ್ವಾಸನೆ ಕಾಡುತ್ತಿದೆಯೇ? ಈ ಸುಲಭ ಸಲಹೆಗಳು ನಿಮಗಾಗಿ! ಪ್ರತಿಯೊಬ್ಬರೂ ಬಾಯಿ ಶುಚಿತ್ವದ...

ಸೈಬರ್ ಅಪರಾಧ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ

ಸೈಬರ್ ಅಪರಾಧ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ಬೆಂಗಳೂರು: ಸೈಬರ್ ಅಪರಾಧಗಳನ್ನು...