ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ
ಬೆಂಗಳೂರು: ಬುಧವಾರ ಚಿನ್ನ–ಬೆಳ್ಳಿ ದರದಲ್ಲಿ ಏಕಾಏಕಿ ಭಾರೀ ಏರಿಕೆ ಕಂಡು ಜನರಲ್ಲಿ ಆತಂಕ ಹುಟ್ಟಿಸಿದ್ದ ಮಾರುಕಟ್ಟೆಯಲ್ಲಿ, ಇಂದು (ಫೆಬ್ರವರಿ 5, 2026 – ಗುರುವಾರ) ಸ್ಪಷ್ಟ ಇಳಿಕೆ ದಾಖಲಾಗಿದೆ. ಚಿನ್ನದ ಬೆಲೆ ಒಂದೇ ದಿನದಲ್ಲಿ ಬರೋಬ್ಬರಿ 5,020 ರೂ ಇಳಿಕೆಯಾಗಿದ್ದು, ಬೆಳ್ಳಿಯ ದರವೂ ಕಡಿಮೆಯಾಗಿದೆ.
ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 5,020 ರೂ ಇಳಿಕೆಯಾಗಿ, 1 ಗ್ರಾಂಗೆ 502 ರೂ ಕಡಿಮೆಯಾಗಿದೆ. ಇದರೊಂದಿಗೆ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15,442 ರೂ ಆಗಿದ್ದು, 10 ಗ್ರಾಂಗೆ 1,54,420 ರೂ ನಿಗದಿಯಾಗಿದೆ.
ಇದೇ ವೇಳೆ, 22 ಕ್ಯಾರೆಟ್ ಚಿನ್ನದ ದರವೂ ಇಳಿಕೆಯಾಗಿದ್ದು,
1 ಗ್ರಾಂಗೆ 460 ರೂ ಇಳಿಕೆ
10 ಗ್ರಾಂಗೆ 4,600 ರೂ ಇಳಿಕೆ
ಇದರಿಂದ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,41,550 ರೂ ಆಗಿದೆ.
ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದು
24 ಕ್ಯಾರೆಟ್ ಚಿನ್ನ (1 ಗ್ರಾಂ): 15,442 ರೂ
24 ಕ್ಯಾರೆಟ್ ಚಿನ್ನ (10 ಗ್ರಾಂ): 1,54,420 ರೂ
ಎನ್ನುವ ಮಟ್ಟದಲ್ಲಿ ವ್ಯವಹಾರ ನಡೆಯುತ್ತಿದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಿಂದ ಮಳಿಗೆಗಳಿಗೆ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಲಿದೆ.
ಇತ್ತ, ಬೆಳ್ಳಿ ಬೆಲೆಯೂ ಇಳಿಕೆ ಕಂಡಿದ್ದು,
1 ಗ್ರಾಂ ಬೆಲೆ 20 ರೂ ಇಳಿಕೆಯಾಗಿ 300 ರೂ ಆಗಿದೆ
1 ಕೆಜಿ ಬೆಲೆ 3,00,000 ರೂ ಮಟ್ಟದಲ್ಲಿದೆ






