ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕುಸಿತ: ಶಿವಮೊಗ್ಗದಲ್ಲಿ AQI ಕಳಪೆ ಮಟ್ಟ, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರ ಸಲಹೆ

Date:

ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕುಸಿತ: ಶಿವಮೊಗ್ಗದಲ್ಲಿ AQI ಕಳಪೆ ಮಟ್ಟ, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರ ಸಲಹೆ

ಬೆಂಗಳೂರು: ಕೆಲ ದಿನಗಳಿಂದ ಏರಿಕೆಯಾಗುತ್ತಿದ್ದ ಶಿವಮೊಗ್ಗದ ವಾಯು ಗುಣಮಟ್ಟ ಸೂಚ್ಯಂಕ (AQI) ಇಂದು ಹಠಾತ್ತನೆ ಕಳಪೆ ಮಟ್ಟಕ್ಕೆ ತಲುಪಿದೆ. ನಿನ್ನೆ ಸ್ವಲ್ಪ ಸುಧಾರಿಸಿಕೊಂಡಂತೆ ಕಂಡಿದ್ದ ಬೆಂಗಳೂರಿನ ವಾಯು ಗುಣಮಟ್ಟವೂ ಇಂದು ಮತ್ತೆ ಕುಸಿತ ಕಂಡಿದೆ. ಇದರೊಂದಿಗೆ ಮಂಗಳೂರು, ಮೈಸೂರು ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ AQI 170ಕ್ಕಿಂತ ಹೆಚ್ಚಾಗಿದೆ.

ಇತ್ತೀಚೆಗೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 169ಕ್ಕೆ ತಲುಪಿದೆ. ಶಿವಮೊಗ್ಗದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 183 ದಾಖಲಾಗಿದ್ದು, ರಾಜ್ಯದಲ್ಲೇ ಅತಿಹೆಚ್ಚು ಮಾಲಿನ್ಯ ಹೊಂದಿದ ನಗರವಾಗಿ ಹೊರಹೊಮ್ಮಿದೆ. ಬಳ್ಳಾರಿಯಲ್ಲೂ AQI 173ಕ್ಕೆ ಏರಿಕೆಯಾಗಿದೆ.

ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಕೆಲವು ನಗರಗಳಲ್ಲಿ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡುಬಂದರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ. ಹೀಗಾಗಿ ಮಕ್ಕಳು, ವೃದ್ಧರು ಮತ್ತು ಉಸಿರಾಟ ಸಮಸ್ಯೆ ಹೊಂದಿರುವವರು ವಿಶೇಷವಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ರಾಜ್ಯದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ (AQI)

ಬೆಂಗಳೂರು – 169

ಮಂಗಳೂರು – 174

ಮೈಸೂರು – 164

ಬೆಳಗಾವಿ – 168

ಕಲಬುರ್ಗಿ – 150

ಶಿವಮೊಗ್ಗ – 183

ಬಳ್ಳಾರಿ – 173

ಹುಬ್ಬಳ್ಳಿ – 148

ಉಡುಪಿ – 164

ವಿಜಯಪುರ – 151

ವಾಯು ಗುಣಮಟ್ಟ ಸೂಚ್ಯಂಕದ ಅರ್ಥ

ಉತ್ತಮ: 0 – 50

ಮಧ್ಯಮ: 50 – 100

ಕಳಪೆ: 100 – 150

ಅನಾರೋಗ್ಯಕರ: 150 – 200

ಗಂಭೀರ: 200 – 300

ಅಪಾಯಕಾರಿ: 300 – 500+

Share post:

Subscribe

spot_imgspot_img

Popular

More like this
Related

ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು’ – ಖರ್ಗೆ ಸೂಚನೆ ಪಾಲಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು’ – ಖರ್ಗೆ ಸೂಚನೆ ಪಾಲಿಸಬೇಕು:...

ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾ

ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು...

ಖ್ಯಾತ ನಟಿ ತಮನ್ನಾ ಭಾಟಿಯಾ ಇಂದಿನಿಂದ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ!

ಖ್ಯಾತ ನಟಿ ತಮನ್ನಾ ಭಾಟಿಯಾ ಇಂದಿನಿಂದ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ! ಬೆಂಗಳೂರು:...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಣ್ಣ ಪ್ರೀತಿಸುವ ದೊಡ್ಡ ವರ್ಗ ಕ್ಷೇತ್ರದಲ್ಲಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಣ್ಣ ಪ್ರೀತಿಸುವ ದೊಡ್ಡ ವರ್ಗ ಕ್ಷೇತ್ರದಲ್ಲಿದ್ದಾರೆ:...