No menu items!
7.3 C
Munich
Wednesday, April 22, 2026

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

Must read

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಚಾಮರಾಜನಗರ: “ಗ್ಯಾರಂಟಿ ಯೋಜನೆಗಳ ಹೊರತು ರಾಜ್ಯದಲ್ಲಿ ಗಮನಾರ್ಹ ಅಭಿವೃದ್ಧಿ ಕಾಣಿಸುತ್ತಿಲ್ಲ” ಎಂದು ಕೇಂದ್ರ ಸಚಿವ H. D. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಡಬೂರಿನಲ್ಲಿ ಶಿವ ಹಾಗೂ ಗಣಪತಿ ದೇವಸ್ಥಾನಗಳ ಉದ್ಘಾಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸರ್ಕಾರ ಈಗ ಗ್ಯಾರಂಟಿ ಯೋಜನೆಗಳಲ್ಲೇ ಸೀಮಿತವಾಗಿದೆ ಎಂದು ಟೀಕಿಸಿದರು. ಸರ್ಕಾರಕ್ಕೆ ದೃಢ ನಿಲುವಿದ್ದರೆ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿತ್ತು ಎಂದರು.

ಗ್ಯಾರಂಟಿ ಯೋಜನೆಗಳ ಕಾರಣ ಜನರ ಮೇಲೆ ತೆರಿಗೆಭಾರ ಹೆಚ್ಚಾಗಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ಎಡವಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಈಗ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಲಾಗುತ್ತಿದೆ. ಕಾದು ನೋಡಬೇಕು. ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರ ಉದ್ಯೋಗ ಕೊಟ್ಟಿದೆಯೇ ಎಂಬ ಪ್ರಶ್ನೆ ಕೇಳುವುದು ಸರಿಯಲ್ಲ. ಅವರು ಕೊಡಲ್ಲ, ನಾನು ಕೊಡಲ್ಲ ಎನ್ನುವುದಲ್ಲ; ಜನರಿಗೆ ಉದ್ಯೋಗ ಸಿಗಬೇಕು ಎನ್ನುವುದೇ ಮುಖ್ಯ ಎಂದರು.

ಎರಡೂವರೆ ವರ್ಷಗಳಿಂದ ಕುರ್ಚಿ ಹಂಚಿಕೆ ವಿಚಾರದಲ್ಲೇ ಸಮಯ ಕಳೆದಿದ್ದು, ಈಗಲಾದರೂ ಸರ್ಕಾರ ತನ್ನ ಆಡಳಿತವನ್ನು ಸರಿಪಡಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

- Advertisement -spot_img

More articles

- Advertisement -spot_img

Latest article