No menu items!
20.3 C
Munich
Monday, June 15, 2026

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

Must read

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಅಂತಾ ಸಾಕಷ್ಟುಬಾರಿ ವದಂತಿಗಳಿದ್ದವು. ಸುತಾರಾಂ ಇಲ್ಲಾ ಅಂತಾ ಇಬ್ಬರು ಅಲ್ಲಗಳಿಯುತ್ತಿದ್ದರು. ಆದರೇ ಈಗ ಇಬ್ಬರು ಜನುಮದ ಜೋಡಿಯಾಗಿದ್ದಾರೆ. ಅವರು ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದು, ಮದುವೆ ಫೋಟೋಗಳನ್ನು ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.

ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ರಶ್ಮಿಕಾ ಮತ್ತು ವಿಜಯ್ ಅವರ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಇವರಿಬ್ಬರೂ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆ ಸಮಯದಿಂದಲೇ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು ಎನ್ನುವ ಮಾತುಗಳು ಹರಿದಾಡುತ್ತಿದ್ದರೂ, ಸಾರ್ವಜನಿಕವಾಗಿ ಇಬ್ಬರೂ ಇದನ್ನುಬಹಿರಂಗಪಡಿಸಿರಲಿಲ್ಲ.ಮದುವೆಯ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ,“ನನ್ನ ಗಂಡನನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಮಿಸ್ಟರ್ ವಿಜಯ್ ದೇವರಕೊಂಡ. ನನಗೆ ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ಕಲಿಸಿದ ವ್ಯಕ್ತಿ. ಶಾಂತಿಯಿಂದ ಇರುವುದು ಹೇಗೆಂದು ಕಲಿಸಿದ ವ್ಯಕ್ತಿ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. ಸತಿ-ಪತಿ ಆಗಿರುವ ರಶ್ಮಿಕಾ ಮತ್ತು ವಿಜಯ್ ಅವರಿಗೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.

- Advertisement -spot_img

More articles

- Advertisement -spot_img

Latest article