No menu items!
16.9 C
Munich
Monday, June 15, 2026

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್!

Must read

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್!

ಚಿಕ್ಕಬಳ್ಳಾಪುರ: ನಂದಿನಿ ಹಾಲು ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ (ಚಿಮುಲ್) ಉತ್ತಮ ಲಾಭ ಗಳಿಸಿದ್ದು, ಅದರ ಲಾಭವನ್ನು ರೈತರಿಗೆ ಹಂಚಲು ಮುಂದಾಗಿದೆ.

ಚಿಮುಲ್ ಪ್ರಸ್ತುತ ಸುಮಾರು 2 ಕೋಟಿ ರೂ. ಲಾಭದಲ್ಲಿದ್ದು, ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿಗೆ 1.50 ರೂ. ಹೆಚ್ಚುವರಿ ದರ ನೀಡಲು ನಿರ್ಧರಿಸಿದೆ. ಈ ಹೆಚ್ಚುವರಿ ದರವನ್ನು ಮುಂದಿನ ಮೇ ತಿಂಗಳವರೆಗೆ ನೀಡಲಾಗುತ್ತದೆ ಎಂದು ಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.

ಮಾತನಾಡಿದ ಅವರು, ಈಗಾಗಲೇ ಒಕ್ಕೂಟದಿಂದ ಪ್ರತಿ ಲೀಟರ್ ಹಾಲಿಗೆ 36 ರೂ. 90 ಪೈಸೆ ನೀಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ನೀಡುವ 5 ರೂ. ಸಬ್ಸಿಡಿ ಸೇರಿ ಒಟ್ಟು 41 ರೂ. 90 ಪೈಸೆ ರೈತರಿಗೆ ದೊರೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲೇ ಅತಿ ಹೆಚ್ಚು ಹಾಲಿನ ದರ ನೀಡುವ ಒಕ್ಕೂಟಗಳಲ್ಲಿ ಚಿಮುಲ್ ಕೂಡ ಒಂದಾಗಿದೆ. ಇದೀಗ ಹೆಚ್ಚುವರಿ 1.50 ರೂ. ನೀಡುವ ನಿರ್ಧಾರದಿಂದ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article