No menu items!
6.5 C
Munich
Saturday, May 16, 2026

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

Must read

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

ಬೆಂಗಳೂರು: ನಗರದ ಕುವೆಂಪು ಮೆಟ್ರೋ ನಿಲ್ದಾಣದ ಸಮೀಪ ಭಾರಿ ಅವಾಂತರ ಸಂಭವಿಸಿದೆ. ನೋಡ ನೋಡುತ್ತಿದ್ದಂತೆಯೇ ಬೃಹತ್ ಮರ ಧರೆಗುರುಳಿದ ಘಟನೆ ಆತಂಕ ಮೂಡಿಸಿದೆ.
ಮರಿಯಪ್ಪ ಫಸ್ಟ್ ಗ್ರೇಡ್ ಕಾಲೇಜ್ ಪಕ್ಕದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮರ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಧ್ವಂಸವಾಗಿವೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಉಂಟಾಗಿದೆ.
ತಡರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಮರದ ಬೇರು ಸಡಿಲಗೊಂಡು ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್, ಮರ ಬೀಳುವ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮರದ ಪಕ್ಕದಲ್ಲೇ ನಿಲ್ಲಿಸಿದ್ದ ಆಟೋ ಹಾಗೂ ಹತ್ತಕ್ಕೂ ಹೆಚ್ಚು ಬೈಕ್‌ಗಳಿಗೆ ಯಾವುದೇ ಹಾನಿಯಾಗಿಲ್ಲ ಎಂಬುದು ಸ್ಥಳೀಯರ ನಿಟ್ಟುಸಿರು.
ಈ ಘಟನೆ ಸಂಭವಿಸಿದ ಸಮಯದಲ್ಲಿ ಯಾರೂ ಇಲ್ಲದ ಕಾರಣ ಭಾರೀ ದುರಂತ ತಪ್ಪಿದಂತಾಗಿದೆ.
ಇದೀಗ GBA ಎಲೆಕ್ಷನ್ ಹಿನ್ನಲೆಯಲ್ಲಿ ಸ್ಥಳಕ್ಕೆ ಸ್ಥಳೀಯ ರಾಜಕಾರಣಿಗಳು ದೌಡಾಯಿಸಿದ್ದು, ಕ್ರೇನ್ ಸಹಾಯದಿಂದ ಮರ ತೆರವು ಕಾರ್ಯ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article