No menu items!
11.7 C
Munich
Friday, May 1, 2026

ದೇಶಾದ್ಯಂತ ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ 993 ರೂ. ಏರಿಕೆ!

Must read

ದೇಶಾದ್ಯಂತ ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ 993 ರೂ. ಏರಿಕೆ!

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಇಂಧನ ಪೂರೈಕೆ ಮೇಲೆ ಒತ್ತಡ ಹೆಚ್ಚಾಗಿರುವ ಹಿನ್ನೆಲೆ, ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರವನ್ನು ಮೇ 1ರಿಂದ ಜಾರಿಗೆ ಬರುವಂತೆ 993 ರೂಪಾಯಿ ಹೆಚ್ಚಿಸಲಾಗಿದೆ. ಆದರೆ ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಮೂಲಗಳ ಪ್ರಕಾರ, ಇಂದಿನಿಂದಲೇ 19 ಕೆಜಿ ವಾಣಿಜ್ಯ ಸಿಲಿಂಡರ್ಗಳ ಮೇಲೆ ಈ ದರ ಏರಿಕೆ ಜಾರಿಯಾಗಿದ್ದು, ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ ಎಂದು ತಿಳಿದುಬಂದಿದೆ.
ಫೆಬ್ರವರಿ 28ರಂದು ಆರಂಭವಾದ ಸಂಘರ್ಷದ ಬಳಿಕ ಇದು ಮೂರನೇ ಬಾರಿಗೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರ ಏರಿಕೆಯಾಗಿದೆ. ಮಾರ್ಚ್ 1ರಂದು 144 ರೂಪಾಯಿ ಏರಿಕೆ ಮಾಡಲಾಗಿತ್ತು. ನಂತರ ಏಪ್ರಿಲ್ 1ರಂದು ಮತ್ತೆ ಸುಮಾರು 200 ರೂಪಾಯಿ ಹೆಚ್ಚಳ ಕಂಡಿತ್ತು.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 993 ರೂಪಾಯಿ ಏರಿಕೆಯಾಗಿ, ಇದೀಗ 3,071 ರೂಪಾಯಿಗೆ ತಲುಪಿದೆ. ಮೊದಲು ಇದರ ಬೆಲೆ 2,078 ರೂಪಾಯಿ ಇತ್ತು. ಮುಂಬೈನಲ್ಲಿ ಸಿಲಿಂಡರ್ ಬೆಲೆ 3,024 ರೂಪಾಯಿಗೆ ಏರಿಕೆಯಾಗಿದೆ, ಹಿಂದಿನ ದರ 2,031 ರೂಪಾಯಿ ಆಗಿತ್ತು.
ಕೋಲ್ಕತ್ತಾದಲ್ಲಿ 994 ರೂಪಾಯಿ ಏರಿಕೆಯೊಂದಿಗೆ ಸಿಲಿಂಡರ್ ಬೆಲೆ 3,202 ರೂಪಾಯಿಗೆ ತಲುಪಿದೆ. ಈ ಮೊದಲು 2,208 ರೂಪಾಯಿ ಇತ್ತು. ಚೆನ್ನೈನಲ್ಲಿ ಕೂಡ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿ 3,237 ರೂಪಾಯಿಗೆ ತಲುಪಿದ್ದು, ಹಿಂದಿನ ದರ 2,246.50 ರೂಪಾಯಿ ಆಗಿತ್ತು.

- Advertisement -spot_img

More articles

- Advertisement -spot_img

Latest article