No menu items!
7.9 C
Munich
Wednesday, April 15, 2026

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯಿಂದಾಗಿ ಹಲವು ಸೇವೆಗೆ ಅಡ್ಡಿ

Must read

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನ ಸೇವೆಗಳಿಗೆ ಅಡ್ಡಿಯಾಗಿದೆ. ನಗರಕ್ಕೆ ಬರುತ್ತಿದ್ದ 6 ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ವಕ್ತಾರರೊಬ್ಬರು ತಿಳಿಸಿದ್ದಾರೆ. ಎರಡು ಅಂತಾರಾಷ್ಟ್ರೀಯ ವಿಮಾನಗಳಾದ ಪ್ಯಾರಿಸ್​ನಿಂದ ಆಗಮಿಸುವ ಏರ್ ಫ್ರಾನ್ಸ್ ಮತ್ತು ಫ್ರಾಂಕ್ಫರ್ಟ್​ನಿಂದ ಲುಫ್ಥಾನ್ಸ ವಿಮಾನವನ್ನು ಚೆನ್ನೈಗೆ ಡೈವರ್ಟ್‌ ಮಾಡಲಾಗಿದೆ. ದೆಹಲಿ, ಮುಂಬೈ ಮತ್ತು ಪುಣೆಯಿಂದ ಇಂಡಿಗೋ ಮತ್ತು ಗೋ ಫಸ್ಟ್‌ನ ನಾಲ್ಕು ದೇಶೀಯ ವಿಮಾನಗಳ ಹಾದಿಯನ್ನೂ ಬದಲಿಸಲಾಗಿದೆ. ಆರು ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು ಒಂಬತ್ತು ವಿಮಾನಗಳು ವಿಳಂಬವಾಗಿವೆ ಎಂದು ಅವರು ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article