ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

1
75

ಅಂತರಾಷ್ಟ್ರೀಯ ಗಡಿ ಎಂದೊಡನೆ ನಿಮ್ಮ ನೆನಪಿಗೆ ಬರುವುದೇನು..? ಮುಳ್ಳುತಂತಿಗಳೆಂದಲ್ಲವೇ..? ಹೌದು ಎಂಬ ಉತ್ತರವೂ ನಿಮ್ಮಿಂದ ಬರುತ್ತೆ.. ಕೆಲವೊಬ್ಬರಿಂದ ಇಲ್ಲವೆಂಬ ಉತ್ತರವೂ ಬರುತ್ತೆ..! ಸರಿ, ಈಗ ತುಂಬಾ ಆಸಕ್ತಿದಾಯಕ ಹಾಗೂ ಕಣ್ಮನ ಸೆಳೆಯ ಅಂತರಾಷ್ಟ್ರೀಯ ಗಡಿಗಳ ಪರಿಚಯವನ್ನು ಮಾಡಿಕೊಳ್ಳೋಣ..! ಈ ಗಡಿಗಳನ್ನು ನೋಡ್ತಾ ಇದ್ರೆ ಇದು ನಿಜಕ್ಕೂ ಅಂತರಾಷ್ಟ್ರೀಯ ಗಡಿಯೇ..?! ಇಷ್ಟೊಂದು ಅಂಟಿಕೊಂಡಿವೆಯಲ್ಲಾ ಅಂತಲೂ ಅನಿಸಬಹುದು..! ಅಷ್ಟೇಅಲ್ಲ.. ಈ ಗಡಿಗಳನ್ನು ನೋಡಿದ್ರೆ ಗಡಿ ಎಂದೇ ಅನಿಸುವುದಿಲ್ಲ..! ಯಾವುದೋ ನಯನಮನೋಹರ ಪ್ರವಾಸಿತಾಣದ ಚಿತ್ರವೇನೋ ಅನಿಸುತ್ತೆ..!
1. ವ್ಯಾಟಿಕನ್ ಸಿಟಿ- ಇಟಲಿ :

1 (1)
ವ್ಯಾಟಿಕನ್ ಸಿಟಿ ಮತ್ತು ಇಟಲಿ ನಡುಬವಿನ ಗಡಿರೇಖೆಯನ್ನು ನೋಡಿದ್ರೆ ಅಚ್ಚರಿ ಆಗುತ್ತೆ..! ಈ ಚಿತ್ರದಲ್ಲೇ ಅದನ್ನು ನೋಡಿ.. ಎಷ್ಟೊಂದು ಸುಂದವಾಗಿದೆ..! ಈ ಗಡಿಯನ್ನು “ಪೀಟರ್ ಸ್ಕ್ವೇರ್”ನಲ್ಲಿ ಗುರುತಿಸಲಾಗಿದೆ..!

2. ಅಮೇರಿಕಾ – ಮೆಕ್ಸಿಕೋ  :

1 (2)

&

1 (3)

ಯುನೈಟೆಡ್ ಸ್ಟೇಟ್ಸ್ (ಯುಎಸ್) ಮತ್ತು ಮೆಕ್ಸಿಕೋ ನಡುವಿನ 2000 ಮೈಲಿ ಉದ್ದದ ಗಡಿ ಹೇಗಿದೆ ಗೊತ್ತಾ..? ನಮ್ಮ ಮಲೆನಾಡ ಕಡೆಯ ತೋಟದಲ್ಲಿ ಉದ್ದನೆಯ ಕಾಲುವೆ ತೋಡಿರ್ತಾರಲ್ಲಾ.. ಆ ರೀತಿ ಚಿಕ್ಕದಾಗಿ.. ಆರಾಮಾಗಿ ಒಂದೆಡೆಯಿಂದ ಇನ್ನೊಂದೆಡೆ ದಾಟುವಂತಿದೆ..! ಇನ್ನೊಂದು ಚಿತ್ರದಲ್ಲಿರುವಂತೆ ನಮ್ಮ ಬೆಂಗಳೂರಿನ ಫ್ಲೈಒವರ್ ನಿಂದ ಕೆಳಭಾಗವನ್ನು ನೋಡಿದ್ರೆ ಎಷ್ಟು ಹೈಟ್ ಇದೆಯೋ ಅದಕ್ಕೂ ತೀರಾ ಕಡಿಮೆ ಅಂತರದಲ್ಲಿ ಗಡಿ ಇದೆ..!

3. ಆಸ್ಟ್ರೀಯಾ-ಸ್ಲೊವೇನಿಯಾ “ಆಲ್ಪೈನ್” ಬಾರ್ಡರ್ :

1 (4)
ಆಸ್ಟ್ರೀಯಾ-ಸ್ಲೊವೇನಿಯಾ ಗಡಿರೇಖೆಯನ್ನು ನೋಡಿ.. ಎರಡು ಜೋಡಿಬೆಟ್ಟಗಳು ಕೂಡಿಕೊಂತೆ ಕಾಣುತ್ತವೆ..!

4. ಫಿನ್ ಲ್ಯಾಂಡ್-ಸ್ವೀಡನ್- ನಾರ್ವೆ :

1 (5)
ಸಮುದ್ರದಲ್ಲಿ ನಡುವೆಯೊಂದು ಉದ್ದನೆ ಬಂಡೆ ಇರುವಂತೆ.. ಕಾಣುತ್ತೆ..! ಪ್ರಾಕೃತಿಕವಾಗಿಯೇ ಹೀಗೆ ನಿರ್ಮಾಣವಾಗಿದೆಯೇನೋ ಅನಿಸುತ್ತೆ..!

5. ಪೋಲ್ಯಾಂಡ್ – ಉಕ್ರೇನ್ :

1 (6)
ಈ ದೇಶಗಳ ಗಡಿರೇಖೆಯಂತೂ ನಮ್ಮ ಕಡೆ ಹೊಲದಲ್ಲಿ ಎರಡು ಅಡಿ ಅಗಲದ ಬದು(ಹಂಚು) ಕಡಿದಂತೆಯೇ ಇದೆ..! ಕ್ರಿಕೆಟ್ನಲ್ಲಿ ಬೌಂಡರಿ ಗುರುತು ಮಾಡಿರ್ತಾರಲ್ಲಾ.. ಅಷ್ಟೇ ಅಗಲದಲ್ಲಿ ಈ ಗಡಿರೇಖೆ ಇದೆ..!

6. ಅರ್ಜೆಂಟೀನಾ-ಬ್ರೆಜಿಲ್- ಪೆರುಗ್ವೆ:

1 (7)
ಈ ಗಡಿಯನ್ನು “ಟ್ರಿಪಲ್ ಫ್ರಾಂಟಿಯರ್” ಎಂದು ಕರೆಯುತ್ತಾರೆ..! ಮೂರೂ ದೇಶಗಳನ್ನು ವಿಭಾಗಿಸುವಂತೆ ಎರಡು ನೀರಿನ ಕಾಲುವೆಗಳಿವೆ ಅಷ್ಟೆ..! ಅರ್ಜೆಂಟೀನಾ ಮತ್ತು ಬ್ರೆಜಿಲ್ ಅಕ್ಕಪಕ್ಕದಲ್ಲಿದ್ದು.. ಅವುಗಳನ್ನು ಒಂದು ಕಾಲುವೆ ವಿಭಾಗಿಸುತ್ತೆ..! ಈ ಎರಡು ದೇಶಗಳ ಮುಂಭಾಗದಲ್ಲಿಪೆರಗ್ವೆ ಇದ್ದು, ಅರ್ಜೆಂಟೀನಾ-ಬ್ರೆಜಿಲ್ ಮತ್ತು ಪೆರುಗ್ವೆ ನಡುವೆ ಮತ್ತೊಂದು ಕಾಲುವೆ ಹಾದು ಹೋಗುತ್ತೆ..!

7. ಕೋಸ್ಟರಿಕಾ-ಪನಾಮ :

1 (8)

ಸಿಕ್ಸಲೋ ನದಿ ಎರಡು ದೇಶಗಳನ್ನು ವಿಭಾಗಿಸುತ್ತೆ..! ಎರಡು ದೇಶಗಳ ನಡುವೆ ಸೇತುವೆ ಇದೆ ಅಷ್ಟೇ.. ಅದೇ ಗಡಿರೇಖೆ..!

8. ಹೈಟಿ-ಡೊಮೆನಿಕನ್ ರಿಪಬ್ಲಿಕ್ :

1 (9)
ಈ ಗಡಿ ಎಂಥವರನ್ನೂ ಬೆರಗುಗೊಳಿಸುತ್ತೆ..! ಅದನ್ನು ನೀವೇ ನೋಡಿ..! ಎಲ್ಲಿದೆ ಗಡಿ..?!

9. ಸ್ಪೇನ್- ಮೊರಕೊ :

1 (10)

ಈ ಎರಡು ದೇಶಗಳ ಅಂತರರಾಷ್ಟ್ರೀಯ ಗಡಿಯಂತೂ ಜಸ್ಟ್ ಒಂದು ಬೇಲಿ ಮಾತ್ರ..!

10. ನಾರ್ವೆ- ಸ್ವೀಡನ್ :

1 (12)

ನಾರ್ವೆ ಮತ್ತು ಸ್ವೀಡನ್ ನಡುವೆ ಕೇವಲ ತೆಳುವಾದ ಗೆರೆ ಮಾತ್ರವಿದೆ..! ಈ ಗೆರೆಯನ್ನು ಸ್ನೋಮೊಬೈಲರ್ಸ್ (ಹಿಮದಲ್ಲಿ ಚಲಿಸೋರ) ಎಳೆಯುತ್ತಲೇ ಇರ್ತಾರೆ.. ಹಹಹ.! ಇಷ್ಟೊಂದು ಸಿಂಪಲ್ಲಾಗಿದೆ ಗಡಿ..!

11. ಅಫಘಾನಿಸ್ತಾನ್- ಪಾಕ್ :

1 (13)
ಟೋರ್ಕನ್ ಗೇಟ್ ಎರಡೂ ದೇಶಗಳನ್ನು ವಿಭಾಗಿಸಿದೆ..!

12. ಯುಎಸ್- ಕೆನಡಾ:

1 (14)

&

1 (15)
5500 ಮೈಲಿಗಲಿಗಿಂತಲೂ ಉದ್ದನೆಯ ಅಂತರರಾಷ್ಟ್ರೀಯ ಗಡಿ..! ಇದರ ಒಂದು ಚಿತ್ರದಲ್ಲಿ ಎರಡು ಬೆಟ್ಟಗಳು ಜೋಡಿಯಾಗಿರುವಂತೆ ಕಾಣುತ್ತೆ..! ಬೆಟ್ಟದ ಕೆಳಗೆ ಬರೀ ನೀರು..! ಇನ್ನೊಂದು ಚಿತ್ರನೋಡಿ ಕಬ್ಬಡಿ ಅಂಗಣದಲ್ಲಿ ಎರಡು ತಂಡವನ್ನು ವಿಭಾಗಿಸುವ ರೇಖೆಯಷ್ಟೇ ಅಗಲದಲ್ಲಿ ಈ ಎರಡೂ ದೇಶಗಳ ನಡುವೆ ಅಂತರರಾಷ್ಟ್ರೀಯ ಗಡಿರೇಖೆ ಇದೆ..!

13.ಬ್ರೆಜಿಲ್ – ಬೊಲಿವಿಯಾ :

1 (16)
ಚಿತ್ರದಲ್ಲಿರುವಂತೆ ಬ್ರೆಜಿಲ್ನಲ್ಲಿ ಅರಣ್ಯನಾಶವಾಗಿದೆ..! ಹಚ್ಚ ಹಸಿರಿನಿಂದ ಕೂಡಿರುವುದು ಬೊಲಿವಿಯಾ..! ಈ ಎರಡು ದೇಶಗಳ ನಡುವೆ ನದಿ ಹರಿಯುವಿಕೆಯ ಮಾರ್ಕ್ ಕಾಣ್ತಾ ಇದೆಯಲ್ಲಾ..? ಇದೇ ಎರಡು ದೇಶಗಳ ನಡುವಿನ ಗಡಿ..!

14. ಅರ್ಜೆಂಟೀನಾ- ಚಿಲಿ :

1 (17)
ಈ ಎರಡು ದೇಶಗಳ ನಡುವಿನ ಗಡಿಯ ಗುರುತೇ “ಜೀಸಸ್ ಕ್ರಿಸ್ತರ ಪ್ರತಿಮೆ”..!

15. ಚೀನಾ-ನೇಪಾಲ್ :

1 (18)
ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಈ ಎರಡು ರಾಷ್ಟ್ರಗಳ ನಡುವಿನ ಅಂತರರಾಷ್ಟ್ರೀಯ ಗಡಿಯಾಗಿದೆ…! ಇದಕ್ಕಿಂತಲೂ ಕಣ್ಮನ ಸೆಳೆಯುವ ಗಡಿಪ್ರದೇಶ ಮತ್ತೊಂದಿಲ್ಲವೇನೋ..?!

16. ಯುಕೆ-ಸ್ಪೇನ್ :

1 (19)
ಗಡಿಯಲ್ಲೊಂದು ಕೇವಲ ಚೆಕ್ ಪೋಸ್ಟ್ ಇದೆ..!

17. ಉತ್ತರ ಗೋಳಾರ್ಧ- ದಕ್ಷಿಣ ಗೋಳಾರ್ಧ :

1 (20)
ಇವರೆರಡ ನಡುವಿನ ಗಡಿ ಸೊನ್ನೆ ಡಿಗ್ರಿ ಅಕ್ಷಾಂಶ..!

18. ಉತ್ತರ ಕೋರಿಯಾ- ದಕ್ಷಿಣಾ ಕೋರಿಯಾ :

1 (21)
ಕೇವಲ ಎರಡು ಕಟ್ಟಡಗಳ ಅಂತರ..!

19. ಸ್ಪೇನ್- ಪೋರ್ಚುಗಲ್ :

1 (22)
ಕೇವಲ ಒಂದು ರಸ್ತೆಯಂತಷ್ಟೇ..ಅಂತರರಾಷ್ಟ್ರೀಯ ಗಡಿ..!

20. ಜರ್ಮನಿ-ಪೋಲ್ಯಾಂಡ್ :

1 (23)
ಕೇವಲ ಒಂದು ಕಾಲುದಾರಿಯೇ ಅಂತರರಾಷ್ಟ್ರೀಯ ಗಡಿ..!

21. ನೆದರ್ ಲ್ಯಾಂಡ್ _ ಬೆಲ್ಜಿಯಂ :

1 (24)
ಇದು ಎಲ್ಲದಕ್ಕಿಂತಲೂ ಗಮನಾರ್ಹವಾಗಿದೆ..! ಅದನ್ನು ಣೀವೇ ನೋಡಿ..! ಕೇವಲ ಡೈನಿಂಗ್ ಟೇಬಲ್ನಲ್ಲಿ ಎದುರು-ಬದರು ಕೂತಾಗ ಎಷ್ಟು ಜಾಗ ಇರುತ್ತೇ..?! ಅಷ್ಟೇ ಗಡಿರೇಖೆ..!

22. ಇಂಡಿಯಾ-ಪಾಕ್ : ನೀವೇ ನೋಡಿ ಹೇಗಿದೆ ಅಂತ..!

1 (26)

&

1 (27)

ನೋಡಿದ್ರಲ್ಲಾ.. ಅಂತರರಾಷ್ಟ್ರೀಯ ಗಡಿಗಳು ಎಷ್ಟೊಂದು ಬೆರಗುಗೊಳಿಸ್ತಾ ಇವೆ..! ಹೀಗೆ ಇಡೀ ವಿಶ್ವದ ರಾಷ್ಟ್ರಗಳು ಶಾಂತಿಯುತವಾಗಿ ನೆಲೆಸಿದ್ರೆ ಎಷ್ಟೊಂದು ಸುಂದರ ಅಲ್ವಾ..?

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!

ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

5 ದಿನದ ಮಗು ಪ್ಯಾನ್ ಕಾರ್ಡ್ ಹೋಲ್ಡರ್ ಅಂತೆ..! ಪ್ಯಾನ್ ಕಾರ್ಡ್ ಬೇಬಿ..!.

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

 

1 COMMENT

LEAVE A REPLY

Please enter your comment!
Please enter your name here