No menu items!
13.9 C
Munich
Wednesday, April 29, 2026

5 ದಿನದ ಮಗು ಪ್ಯಾನ್ ಕಾರ್ಡ್ ಹೋಲ್ಡರ್ ಅಂತೆ..! ಪ್ಯಾನ್ ಕಾರ್ಡ್ ಬೇಬಿ..!.

Must read

ಪ್ಯಾನ್ ಕಾರ್ಡ್ ( ಪರಮನೆಂಟ್ ಅಕೌಂಟ್ ನಂಬರ್ ) ಇದು ಇವತ್ತಿನ ಜನರಿಗೆ ಅತ್ಯವಶ್ಯಕ, ಯಾವುದೇ ವ್ಯಕ್ತಿಯ ಆಧಾಯವನ್ನು ಅಳೆಯಲು ಈ ಪ್ಯಾನ್ ಕಾರ್ಡ್ ಅವಶ್ಯಕವಾಗಿ ಬೇಕೆ ಬೇಕು, ಬ್ಯಾಂಕಿನ ವ್ಯವಹಾರ, ವ್ಯಾಪಾರ ವಹಿವಾಟು, ಉದ್ಯೋಗ ಹೀಗೆ ನಾವು ಪಾಲ್ಗೊಳ್ಳೊ ಹಲವಾರು ಕ್ಷೇತ್ರಗಳಲ್ಲಿ ಇಂದು ಈ ಪ್ಯಾನ್ ಕಾರ್ಡ್ ನ ಅವಶ್ಯಕಥೆ ಮುಖ್ಯವಾಗಿದೆ, ಆದರೆ ಇವತ್ತು ನಾವ್ ಹೇಳ್ತಿರೋ ವಿಚಾರಾನೆ ಬೇರೆ, ಏನದು ಅಂದ್ರೆ ಗಿನ್ನಿಸ್ ರೆಕಾರ್ಡ್ ವಿಚಾರ, ಇದೇನಪ್ಪಾ ಇದು ಪ್ಯಾನ್ ಕಾರ್ಡ್ ಇಂದ ಡೈರೆಕ್ಟ್ ಆಗಿ ಗಿನ್ನಿಸ್ ರೆಕಾರ್ಡ್ ಕಡೆ ಹೊಗ್ತಿದಾರಲ್ಲ ಅಂತ ಯೋಚಿಸ್ತಿದ್ದೀರ? ವಿಷಯ ಇರೋದೆ ಇಲ್ಲಿ ಈ ಪ್ಯಾನ್ ಕಾರ್ಡ್ ಮಾಡಿಸೋ ವಿಚಾರವಾಗಿ ಇಂದು ಅನೇಕ ಪುಟ್ಟ ಮಕ್ಕಳು ಸುದ್ದಿಯಾಗ್ತಾ ಇದ್ದಾರೆ, ಬರೀ ಸುದ್ದೀ ಆದ್ರೆ ಪರಾವಾಗಿಲ್ಲ ಗಿನ್ನಿಸ್ ದಾಖಲೆಯ ಪುಟ ಸೇರಿ ಸುದ್ದಿ ಆಗ್ತಿರೋದು ವಿಶೇಷ, ಇದೀಗ ಬಿಹಾರದ ಮುಂಗರ್ ಜಿಲ್ಲೆಯ ಕುಮಾರ್ ಸಜಲ್ ಮತ್ತು ಸ್ಮೃತಿ ಸಿನ್ಹಾರ ಮುದ್ದಿನ ಮಗಳು ಆಶಿ ತಾನು ಜನ್ಮ ತಳೆದ ಕೇವಲ 5 ದಿನಕ್ಕೆ ಪ್ಯಾನ್ ಕಾರ್ಡ್ ಮಾಡಿಸಿಕೊಂಡು ಯಂಗೆಸ್ಟ್ ಪ್ಯಾನ್ ಕಾರ್ಡ್ ಹೋಲ್ಡರ್ ಅನ್ನೋ ಖ್ಯಾತಿಗೆ ಪಾತ್ರಳಾಗೊ ಮೂಲಕ ವಿಶ್ವದಾಖಲೆ ಬರೆದಿದ್ದಾಳೇ, ಅಲ್ಲದೆ ಈ ಹಿಂದೆ ಇದೆ ವಿಚಾರವಾಗಿ ದಾಖಲೆ ಬರೆದಿದ್ದ 49 ದಿನದ ಚೆನೈನ ಅಕ್ಷಿತ ಹಾಗೂ 56 ದಿನದ ಕ್ರಿಷ್ಣೆ ಟಾಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಈ 5 ದಿನದ ಮುದ್ದು ಇದೀಗ ತನ್ನದಾಗಿಸಿಕೊಂಡಿದ್ದು ಈಕೆಗೆ ನೀಡಿರುವ ಪ್ಯಾನ್ ಕಾರ್ಡ್ ಅನ್ನು ಮೈನರ್ ಪ್ಯಾನ್ ಕಾರ್ಡ್ ಹೆಸರಿನಲ್ಲಿ ಆಶಿಗೆ ನೀಡಲಾಗಿದೆ.
ಅದೇನೆ ಇರಲಿ ಆದಾಯ, ಹಣ, ಉದ್ಯೋಗ ಇದಾವುದರ ಬಗ್ಗೆ ಇನ್ನು ಅರಿವೆಯೆ ಇಲ್ಲದ ಆಶಿ ಇದೀಗ ಪ್ಯಾನ್ ಕಾರ್ಡ್ ಪಡೆದುಕೋಂಡಿದ್ದು ಈ 5 ದಿನದ ಮಗುವಿನ ದಾಖಲೆ ಅಳಿಸೋಕೆ ಇನ್ನು ಅದಾವ ಮಗು ಜನ್ಮ ತಳೆಯುತ್ತೋ ಕಾದು ನೋಡ್ಬೇಕು..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!

ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article