ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಬಾಳಲ್ಲಿ ಮತ್ತೆ ಹೊಸ ಮನ್ವಂತರ ಮೂಡಿದೆ. ಈ ಮೂಲಕ ಅನು ಪ್ರಭಾಕರ್ ಎರಡನೇ ಬಾರಿಗೆ ಮದುಮಗಳಾಗಿ ಹಸೆಮಣೆ ಏರಿದ್ರೆ ರಘು ಮುಖರ್ಜಿ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.
2014 ರಲ್ಲಿ ಜಯಂತಿ ಪುತ್ರ ಕೃಷ್ಣಮೂರ್ತಿ ಅವರೊಂದಿಗಿನ ವೈವಾಹಿಕ ಜೀವನಕ್ಕೆ ಅಂತ್ಯಹಾಡಿ ಡಿವೋರ್ಸ್ ಪಡೆದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ ಅನು ಪ್ರಭಾಕರ್, ಈಗ ರಘು ಮುಖರ್ಜಿಯೊಂದಿಗೆ ಸಪ್ತಪದಿ ತುಳಿದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ರಘು ಮುಖರ್ಜಿಗೆ ಸೇರಿದ ಯಲಹಂಕದ ಪ್ರೆಸ್ಟೀಜ್ ಕಾರ್ಲೆ ಅಪಾರ್ಟ್ ಮೆಂಟ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ 35 ರ ಪ್ರಾಯದ ಇಬ್ಬರೂ ಸತಿ ಪತಿಗಳಾಗಿದ್ದಾರೆ. ತೀರಾ ಖಾಸಗಿಯಾಗಿ ನಡೆದ ವಿವಾಹ ಸಮಾರಂಭದಲ್ಲಿ ಆತ್ಮೀಯರು ಹಾಗೂ ಕುಟುಂಬಸ್ಥರು ಮಾತ್ರ ಹಾಜರಿದ್ರು.
ಎರಡು ವರ್ಷದ ಹಿಂದೆಯೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದ್ರೆ ಈ ಜೋಡಿ ಈ ಬಗ್ಗೆ ಗೌಪ್ಯತೆ ಕಾಪಾಡುವಲ್ಲಿ ಗೆದ್ದಿದ್ದು ಇವತ್ತು ಅಧಿಕೃತ ಮದುವೆ ಮುದ್ರೆ ಒತ್ತೋ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಅದೇನೇ ಇರಲಿ, ಇಬ್ಬರ ದಾಂಪತ್ಯ ಜೀವನ ಸುಖಕರವಾಗಿರಲಿ. ಈ ಜೋಡಿ ನೂರ್ಕಾಲ ಸಂತಸದಿಂದ ಬಾಳಲಿ ಅನ್ನೋ ಹಾರೈಕೆಯಷ್ಟೇ ನಮ್ಮದು.
- ಶ್ರೀ
POPULAR STORIES :
ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?
ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?