ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ, ಹೂವು-ಹಣ್ಣುಗಳ ಬೆಲೆ ಭಾರಿ ಏರಿಕೆ!

Must read

ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ, ಹೂವು-ಹಣ್ಣುಗಳ ಬೆಲೆ ಭಾರಿ ಏರಿಕೆ!

 

 

 

 

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಹಬ್ಬದ ಪೂಜೆಗೆ ಅಗತ್ಯವಿರುವ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಬೆಂಗಳೂರಿನ ಪ್ರಸಿದ್ಧ ಕೆಆರ್ ಮಾರುಕಟ್ಟೆಯಲ್ಲಿ ಭಾನುವಾರ ಜನಸಾಗರವೇ ಹರಿದುಬಂದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಭಾರಿ ಏರಿಕೆಯಾಗಿದ್ದು, ಸಾರ್ವಜನಿಕರ ಜೇಬಿಗೆ ಬಿಸಿ ತಟ್ಟಿದೆ.

 

ಮಳೆಯಿಂದ ಹೂವಿನ ಕಟಾವಿಗೆ ತೊಂದರೆ, ಪೂರೈಕೆ ಕಡಿತ: ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ರೈತರಿಗೆ ಹೂವು ಕಟಾವು ಮಾಡಲು ತೊಂದರೆಯಾಗಿದೆ. ಮಳೆಯಿಂದ ಹೂವಿನ ಬೆಳೆ ಹಾನಿಗೊಳಗಾಗಿದ್ದು, ಮಾರುಕಟ್ಟೆಗೆ ಬರುವ ಹೂವುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ದರ ಏರಿಕೆಯಾಗಿದ್ದು, ಅದರ ಹೊರೆ ಗ್ರಾಹಕರ ಮೇಲೆ ಬಿದ್ದಿದೆ. ದರ ಹೆಚ್ಚಳದಿಂದಾಗಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

 

ಕೆಆರ್ ಮಾರುಕಟ್ಟೆಯಲ್ಲಿ ಹೂವು ಮತ್ತು ಹಾರಗಳ ದರ ಪಟ್ಟಿ:

 

ಸೇವಂತಿಗೆ: 1 ಮಾರು ₹150

ಮಲ್ಲಿಗೆ: 1 ಮಾರು ₹120

ಕನಕಾಂಬರ: 1 ಮಾರು ₹120

ಸಣ್ಣ ಮಿನಿ ರೋಸ್ ಹಾರ: ₹550

ದೊಡ್ಡ ರೋಸ್ ಹಾರ: ₹800

ಸುಗಂಧರಾಜ ಹಾರ: ₹300

ದೊಡ್ಡ ತೋಮಾಲೆ: ₹2,500

ಮಿನಿ ಮಲ್ಲಿಗೆ ಹಾರ: ₹600

ಸಾಮಾನ್ಯ ಜೋಡಿ ತೋಮಾಲೆ: ₹3,000

ತುಳಸಿ ಹಾರ: ₹30 ರಿಂದ ₹40

 

ಹಣ್ಣು ಮತ್ತು ಪೂಜಾ ಸಾಮಗ್ರಿಗಳ ದರ ಪಟ್ಟಿ:

 

ಕಪ್ಪು ದ್ರಾಕ್ಷಿ: ಕೆಜಿಗೆ ₹200

ಹಸಿರು ದ್ರಾಕ್ಷಿ: ಕೆಜಿಗೆ ₹280

ಕಿತ್ತಳೆ: ಕೆಜಿಗೆ ₹100

ಸೇಬು: ಕೆಜಿಗೆ ₹140 ರಿಂದ ₹200

ಸಪೋಟ: ಕೆಜಿಗೆ ₹100

ದಾಳಿಂಬೆ: ಕೆಜಿಗೆ ₹200 ರಿಂದ ₹250

ಏಲಕ್ಕಿ ಬಾಳೆಹಣ್ಣು: ಕೆಜಿಗೆ ₹80

ದೊಡ್ಡ ಬಾಳೆಹಣ್ಣು: ಕೆಜಿಗೆ ₹40

ಅನಾನಸ್: ಜೋಡಿಗೆ ₹120

ಕುಂಬಳಕಾಯಿ: ಕೆಜಿಗೆ ₹40

ಬಾಳೆಕಂದು: ₹50 ರಿಂದ ₹100

ವೀಳ್ಯದೆಲೆ: 1 ಕಟ್ಟು ₹80

 

ಮಾರುಕಟ್ಟೆ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್: ಹಬ್ಬದ ಖರೀದಿಗಾಗಿ ಭಾನುವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೆಆರ್ ಮಾರುಕಟ್ಟೆಗೆ ಆಗಮಿಸಿದ್ದರಿಂದ ಮಾರುಕಟ್ಟೆಯ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳ ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡಬೇಕಾಯಿತು.

- Advertisement -spot_img

More articles

- Advertisement -spot_img

Latest article