ಅತಿಯಾದ ಬಾದಾಮಿ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳೇನು ಗೊತ್ತಾ..?
ಬಾದಾಮಿ ಸೇವನೆಯು ಮನಸ್ಥಿತಿ ಸುಧಾರಣೆಗೆ, ಹೃದ್ರೋಗ ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯಕ. ಬಾದಾಮಿ ದೇಹದಲ್ಲಿ ಉತ್ಕರ್ಷಣ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ ಬಾದಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಅಭ್ಯಾಸವು ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಬಾದಾಮಿ ನಮ್ಮ ದೇಹಕ್ಕೆ ಎಷ್ಟೇ ಆರೋಗ್ಯಕರವಾಗಿದ್ದರೂ ಅದನ್ನು ಹೆಚ್ಚಾಗಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು ಎಂಬುದು ಕೂಡ ನಿಮಗೆ ತಿಳಿದಿರಲಿ.
ಮೂತ್ರಪಿಂಡದ ಕಲ್ಲು:
ಬಾದಾಮಿಯಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಫೈಬರ್, ವಿಟಮಿನ್ ಇತ್ಯಾದಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದೆ. ಜೊತೆಗೆ ಬಾದಾಮಿಯಲ್ಲಿ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುವ ಆಕ್ಸೇಟ್ ಎಂಬ ಸಂಯುಕ್ತವಿದೆ. ಈ ಕಾರಣ ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿ ಆಕ್ಸಲೇಟ್ ಪ್ರಮಾಣದ ಹೆಚ್ಚಾಗುತ್ತದೆ. ಇದು ಮೂತ್ರಪಿಂಡಗಳಲ್ಲಿ ಸಂಗ್ರಹಗೊಂಡು ಕಿಡ್ನಿ ಸ್ಟೋನ್ ಉಂಂಟಾಗಲು ಕಾರಣವಾಗುತ್ತದೆ.
ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು:
ಬಾದಾಮಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ. ಆದರೆ ಅವುಗಳ ಅತಿಯಾದ ಸೇವನೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಕಾರಕವಾಗಿದೆ. ಬಾದಾಮಿಯಲ್ಲಿ ನಾರಿನಂಶ ಹೆಚ್ಚಿದ್ದು, ಅಧಿಕ ಪ್ರಮಾಣದಲ್ಲಿ ನಾರಿನಂಶವನ್ನು ಸೇವಿಸುವುದರಿಂದ ಗ್ಯಾಸ್, ಹೊಟ್ಟೆ ನೋವು, ಅಜೀರ್ಣದಂತಹ ಹೊಟ್ಟೆ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಬಾದಾಮಿಯಲ್ಲಿರುವ ಆಕ್ಸಲೇಟ್ ಅಂಶವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು.
ಬೊಜ್ಜು ಹೆಚ್ಚಾಗಲು ಕಾರಣವಾಗಬಹುದು:
ಬಾದಾಮಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳಿವೆ. ಆದ ಕಾರಣ ಬಾದಾಮಿಯನ್ನು ಹೆಚ್ಚು ಸೇವಿಸಿದಾಗ, ಕ್ಯಾಲೋರಿ ಸೇವನೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ, ಕ್ಯಾಲೋರಿ ಸೇವನೆಯು ಹೆಚ್ಚಾದಾಗ, ದೇಹ ತೂಕ ಕೂಡಾ ಹೆಚ್ಚಾಗುತ್ತದೆ. ಹಾಗಾಗಿ ಬಾದಾಮಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿಬೇಕು.
ಆಕ್ಸಲೇಟ್ ಅಂಶ:
ಬಾದಾಮಿಯು ನೈಸರ್ಗಿಕವಾಗಿ ಕಂಡುಬರುವ ಸಂಯುಕ್ತಗಳಾದ ಆಕ್ಸಲೇಟ್‌ಗಳನ್ನು ಹೊಂದಿರುತ್ತದೆ. ಆಕ್ಸಲೇಟ್‌ಗಳಿಗೆ ಒಳಗಾಗುವ ವ್ಯಕ್ತಿಗಳಲ್ಲಿ ಕಿಡ್ನಿ ಸ್ಟೋನ್ ರಚನೆಗೆ ಕಾರಣವಾಗಬಹುದು. ನಿಮಗೆ ಕಿಡ್ನಿ ಸ್ಟೋನ್ ಈಗಾಗಲೇ ಒಮ್ಮೆ ಉಂಟಾಗಿದ್ದರೆ ಬಾದಾಮಿ ಸೇರಿದಂತೆ ಆಕ್ಸಲೇಟ್‌ಗಳಲ್ಲಿ ಹೆಚ್ಚಿನ ಆಹಾರಗಳ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ.






