No menu items!
12.4 C
Munich
Wednesday, April 29, 2026

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಬಳಸಬೇಡಿ ಎಂದು ಹೇಳಿದ ಸಾರಿಗೆ ಇಲಾಖೆ..!

Must read

ಬೆಂಗಳೂರಿನ ಜನಕ್ಕೆ ಕಳೆದ ದಿನ ಓಲಾ ಮತ್ತು ಉಬರ್ ಬೈಕ್ ಟ್ಯಾಕ್ಸಿ ಸೇವೆ ಕೇಳಿ ತುಂಬ ಸಂತಸದಲ್ಲಿದ್ದರು. ಆದರೆ ಇಂದು ಆ ಬೈಕ್ ಸೇವೆ ಅಕ್ರಮ ಓಲಾ ಮತ್ತು ಊಬರ್ ಬೈಕ್ ಟ್ಯಾಕ್ಸಿ ಸೇವೆಯನ್ನು ಬಳಸಬೇಡಿ ಎಂದು ಸಾರಿಗೆ ಇಲಾಖೆ ಜನರಿಗೆ ಮನವಿ ಮಾಡಿದ್ದು, ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಬೈಕ್‌ನಲ್ಲಿ ಸಂಚರಿಸುವಾಗ ಯಾವುದೇ ಅಪಘಾತ ನಡೆದರೆ ವಿಮೆ ಸೌಲಭ್ಯ ಸಿಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಎರಡೂ ಕಂಪನಿಗಳು ಯಾವುದೇ ರೀತಿಯ ಪರವಾನಿಗಿಯನ್ನು ಸಾರಿಗೆ ಇಲಾಖೆಯಿಂದ ಪಡೆಯದೇ ಈ ಸೇವೆಯನ್ನ ಆರಂಭಿಸಲು ಸಿದ್ದವಾಗಿದೆ. ಬೈಕ್ ಟ್ಯಾಕ್ಸಿ ಯಲ್ಲಿ ನಾಗರೀಕರು ಸಂಚಾರ ಮಾಡದಂತೆ ಎಚ್ಚರಿಕೆ ನೀಡಿದೆ. ಕರ್ನಾಟಕ ಸರ್ಕಾರದನ್ವಯ ಜಾರಿಯಲ್ಲಿರುವ 1988ರ ಮೊಟಾರ್ ವಾಹನ ಕಾಯಿದೆಯಡಿ ಎರಡೂ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಹೇಳಿದ್ದು ದ್ವಿಚಕ್ರ ವಾಹನ ಖಾಸಗಿ ಸಾರಿಗೆ ಎಂದು ಪರಿಗಣಿಸಲಾಗಿದೆ. ಓಲಾ ಬೈಕ್ ಟ್ಯಾಕ್ಸಿ ಮತ್ತು ಉಬರ್ ಮೊಟೊ ಈ ಸೇವೆಯಿಂದ ದೂರ ಉಳಿಯಬೇಕು ಎಂದು ಆದೇಶಿಸಿದೆ.

 

ಓಲಾ’ ಕ್ಯಾಬ್ ಸೇವಾ ಸಂಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ನಗರದಲ್ಲಿ ‘ಬೈಕ್ ಟ್ಯಾಕ್ಸಿ’ ಸೇವೆಯನ್ನು ಬೆಂಗಳೂರಿನಲ್ಲಿ ಮಾರ್ಚ್ 2 ರಿಂದ ಈ ಸೇವೆಯನ್ನು ಅರಂಭಿಸಿತ್ತು. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಉಳಿದ ನಗರಗಳು, ರಾಜ್ಯಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುವುದು ಹೇಳಿತ್ತು.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಉದ್ಯಮಿಗಳಿಗೆ ಲಕ್ಷಗಟ್ಟಲೆ ಸಾಲ ಕೊಡೋ ಕೋಟ್ಯಾಧಿಪತಿ ಭಿಕ್ಷುಕ..!

ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article