ನಗರಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು

Date:

ಕೊಳ್ಳೇಗಾಲ ನಗರಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಹಾಲಿ ಶಾಸಕ ಎನ್ ಮಹೇಶ್ ಪ್ರಾಬಲ್ಯ ಮೆರೆದಿದ್ದಾರೆ. ಪರಿಣಾಮ, ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷಗಳು ತೀವ್ರ ಮುಖಭಂಗಕ್ಕೆ ಒಳಗಾಗಿವೆ. 7 ಸ್ಥಾನಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬರೋಬ್ಬರಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಒಂದರಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿದೆ. ಎನ್ ಮಹೇಶ್ ಬೆಂಬಲಿಗರ ಸಂಭ್ರಮ ಮುಗಿಲುಮುಟ್ಟಿದೆ. ವಿಜಯೋತ್ಸವ ಆಚರಣೆಯಲ್ಲಿ ಬೆಂಬಲಿಗರು ನಿರತರಾಗಿದ್ದಾರೆ. ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಬಿಎಸ್ಪಿಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದರು. ಈ ಹಂತದಲ್ಲಿ ನಡೆದಿದ್ದ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಬಿಎಸ್ಪಿಯ ಏಳು ಸದಸ್ಯರು ಅನರ್ಹಗೊಂಡಿದ್ದರು. ಈ ಸ್ಥಾನಗಳಿಗೆ ಮೂರು ದಿನಗಳ ಹಿಂದೆ ಚುನಾವಣೆ ನಡೆದಿತ್ತು. ಶಾಸಕ ಎನ್ ಮಹೇಶ್ ಜೊತೆ ಗುರುತಿಸಿಕೊಂಡಿದ್ದ 7 ಸದಸ್ಯರಿಗೂ ಬಿಜೆಪಿ ಟಿಕೆಟ್ ನೀಡಿತ್ತು. ಈ ಏಳು ಮಂದಿ ಪೈಕಿ ಆರು ಮಂದಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಎನ್ ಮಹೇಶ್ ಯಶಸ್ವಿ ಆಗಿದ್ದಾರೆ.

Share post:

Subscribe

spot_imgspot_img

Popular

More like this
Related

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್ ಬೆಂಗಳೂರು: ನಗರದಲ್ಲಿ ಪೆಟ್ರೋಲ್...

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ ಇತ್ತೀಚಿನ...

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು ಬೆಂಗಳೂರು:...

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....