ಬೋಗಿ ಹಬ್ಬ ಎಫೆಕ್ಟ್: 19 ವಿಮಾನ ಸಂಚಾರ ವಿಳಂಬ..!

Must read

ರಾಜ್ಯದಲ್ಲಿ ಸಂಕ್ರಾಂತಿ ಆಚರಿಸುವಂತೆ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬದ ಮುನ್ನ ದಿನ ಆಚರಿಸಲಾಗುವ ಬೋಗಿ ಹಬ್ಬದಲ್ಲಿ ಹಳೆಯ ಸಾಮಾಗ್ರಿಗಳನ್ನು ಸುಟ್ಟು ಹಾಕುತ್ತಾರೆ. ಆದ್ರೆ ಇದರ ಪರಿಣಾಮವಾಗಿ ಚೆನ್ನೈನ ಅಂತರಾಷ್ಟ್ರೀಯ ಹಾಗೂ ದೇಶೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 19 ವಿಮಾನಗಳು ತಡವಾಗಿ ಹಾರಾಟ ನಡೆಸಿದೆ..! ಬೋಗಿ ಹಬ್ಬದಲ್ಲಿ ಸುಟ್ಟ ವಸ್ತುಗಳಿಂದ ಹೊರ ಹೊಮ್ಮಿದ ದಟ್ಟ ಹೊಗೆಯಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ..! ಮಸ್ಕಟ್, ಮಾರಿಷಸ್ ಮತ್ತು ಕೊಲಂಬೊ ಸ್ಥಳಗಳಿಗೆ ಪ್ರಯಾಣ ಬೆಳೆಸಬೇಕಾಗಿದ್ದ 14 ವಿಮಾನಗಳು ಎರಡು ಗಂಟೆಗಳ ಕಾಲ ತಡವಾಗಿ ಪ್ರಯಾಣ ಬೆಳೆಸಬೇಕಾಯಿತು. ಇನ್ನು ದುಬೈನಿಂದ ಬಂದಿದ್ದ ಅಂತರಾಷ್ಟ್ರೀಯ ಸರಕು ಸಾಗಣೆ ವಿಮಾನವನ್ನು ಕೊಚ್ಚಿ ಮಾರ್ಗಕ್ಕೆ ಬದಲಾಯಿಸಲಾಯಿತು. ಬೆಂಗಳೂರು ಮತ್ತು ಕೊಯಂಬತ್ತೂರ್‍ಗೆ ಪ್ರಯಾಣ ಬೆಳೆಸಿದ್ದ 5 ದೇಶೀಯ ವಿಮಾನ ಹಾರಾಟ ಸೇವೆಗೂ ದಟ್ಟ ಹೊಗೆಯಿಂದ ವಿಳಂಬವಾಗಿತ್ತು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶೀಘ್ರದಲ್ಲೆ ಕ್ಯಾಶ್ ವಿತ್‍ಡ್ರಾಗೆ ಬೀಳಲಿದೆ ತೆರಿಗೆ..?

ಬಾಯ್ ಫ್ರೆಂಡ್ ಇದಾರಾ..? ಹಾಗಿದ್ರೆ ಮಾತ್ರ ಕಾಲೇಜ್‍ಗೆ ಬನ್ನಿ..!

ಇರ್‍ರೆಸ್ಪಾನ್ಸಿಬಲ್ ಆಟಕ್ಕೆ ನನ್ ******* ಅಂದ ಪ್ರಥಮ್.!!

ಈ ವರ್ಷದಿಂದ ರಿಮೇಕ್ ಮಾಡಲ್ವಂತೆ ಕಿಚ್ಚ ಸುದೀಪ..?

ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್

ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!

ಖಂಡಿಸುವ ಪ್ರಥಮ್ ನುಡಿದ ಭವಿಷ್ಯ ನಿಜವಾಗುತ್ತಾ??

ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!

- Advertisement -spot_img

More articles

- Advertisement -spot_img

Latest article