No menu items!
10.2 C
Munich
Tuesday, September 15, 2026

ಗೋಲ್ಡ್ ಸ್ಮಗ್ಲಿಂಗ್ ಕೇಸ್: ಇಂದು ರನ್ಯಾ ರಾವ್ ಜೈಲಿನಿಂದ ಬಿಡುಗಡೆ

Must read

ಗೋಲ್ಡ್ ಸ್ಮಗ್ಲಿಂಗ್ ಕೇಸ್: ಇಂದು ರನ್ಯಾ ರಾವ್ ಜೈಲಿನಿಂದ ಬಿಡುಗಡೆ

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಕಳೆದ ವರ್ಷ ಸುಮಾರು ₹102 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಅವರು ಬಂಧಿತರಾಗಿ ಜೈಲು ಸೇರಿದ್ದರು. ನಂತರ ನ್ಯಾಯಾಲಯದಿಂದ ಜಾಮೀನು ದೊರಕಿದ್ದರೂ, ಕಾಫಿಪೋಸಾ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರಿದರು.
ಕಾಫಿಪೋಸಾ ಕಾಯ್ದೆಯಡಿ ಸಾಮಾನ್ಯವಾಗಿ ಒಂದು ವರ್ಷದ ಕಾಲ ಬಂಧನ ವಿಧಿಸಲಾಗುತ್ತದೆ. ಅದರಂತೆ, ಈ ಅವಧಿ ಇಂದು ಪೂರ್ಣಗೊಂಡಿರುವುದರಿಂದ ರನ್ಯಾ ರಾವ್ ಅವರನ್ನು ಇಂದು ಸಂಜೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.

- Advertisement -spot_img

More articles

- Advertisement -spot_img

Latest article