ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

1
71

ಆ ಹುಡುಗನ ವಯಸ್ಸಿನಲ್ಲಿ ಎಲ್ಲರೂ ಕಾರ್ಟೂನ್ ನೋಡುತ್ತಾ, ವಿಡಿಯೋ ಗೇಮ್ ಆಡುತ್ತಾ ಅಥವಾ ಪರೀಕ್ಷೆಗೆ ಪ್ರಿಪರೇಶನ್ ಮಾಡುತ್ತಾರೆ. ಆದರೆ ಈತ ಮಾತ್ರ ಬಡ ಮಕ್ಕಳಿಗೆ ಪಾಠ ಮಾಡುತ್ತಿದ್ದಾನೆ, ಅದೂ ಕೂಡಾ ಬಾಲ್ ಕೌಪಲ್ಸ್ ಎಂಬ ಸಂಸ್ಥೆ ತೆರೆದು ಬರೋಬ್ಬರಿ 125 ಗ್ರಾಮದ ಮಕ್ಕಳಿಗೆ ಅತಿ ಚಿಕ್ಕ ವಯಸ್ಸಿನಲ್ಲೇ ಅಕ್ಷರ ದಾನಮಾಡುತ್ತಿದ್ದಾನೆ.
ಆತನ ವಯಸ್ಸು 11. ಓದುತ್ತಿರುವುದು 7ನೇ ಕ್ಲಾಸ್ ನಲ್ಲಿ. ಹೆಸರು ಆನಂದ್ ಕೃಷ್ಣ ಮಿಶ್ರಾ ಅಂತ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಏನಾದರೂ ಒಂದು ಸಾಧನೆ ಮಾಡುವ ತುಡಿತ ಈತನಲ್ಲಿತ್ತು. ಆದ್ದರಿಂದ 2012ರಲ್ಲಿ ಬಾಲ್ ಕೌಪಲ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ. ಮೊದಲಿಗೆ ಒಂದು ಸ್ಲಮ್ ನ ಐದು ಮಕ್ಕಳಿಗೆ ಪಾಠ ಹೇಳಿಕೊಡಲಾರಂಭಿಸಿದ. ಬಳಿಕ ತನ್ನ ಮಿತ್ರರನ್ನು ತನ್ನ ಸಂಘಕ್ಕೆ ಸೇರಿಸಿಕೊಂಡು ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಪಾಠ ಮಾಡಲಾರಂಭಿಸಿದ. ಅದು ದೊಡ್ಡ ಮಟ್ಟಕ್ಕೆ ಬೆಳೆಯಿತು. 700ರಷ್ಟು ಬಡ ಮಕ್ಕಳಿಗೆ ಗಣಿತ, ಕಂಪ್ಯೂಟರ್ ಮತ್ತು ಇಂಗ್ಲೀಷನ್ನೂ ಹೇಳಿ ಕೊಡುವಷ್ಟರ ಮಟ್ಟಿಗೆ ಬೆಳೆಯಿತು.
ಇಷ್ಟು ದೊಡ್ಡ ಮಟ್ಟಕ್ಕೆ ಸಂಸ್ಥೆ ಬೆಳದರೂ, 700 ಮಕ್ಕಳಿಗೆ ಶಿಕ್ಷಣ ನೀಡಿದರೂ ಆನಂದ್ ಮನಸ್ಸು ಇನ್ನೂ ಏನನ್ನೋ ಬಯಸುತ್ತಿತ್ತು. ಆದ್ದರಿಂದ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಅನೂಪ್ ಮತ್ತು ರೀನಾ ಮಿಶ್ರಾರವರ ಸಹಾಯ ಕೇಳಿದೆ. ಮಗನ ಆಸೆಗೆ ಹೆತ್ತವರು ಇಲ್ಲ ಎನ್ನುತ್ತಾರಾ..? ಅವರೂ ಸಹಾಯ ಮಾಡಿದರು. ಆದ್ದರಿಂದ 11ರ ಪೋರ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸತೊಡಗಿದ್ದಾನೆ.

ಹೇಗೆ ಮೂಡಿತು ಗೊತ್ತಾ ಈ ಪರಿಕಲ್ಪನೆ..?

ಆನಂದ್ 4ನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗ ರಜೆ ಇದ್ದಿದ್ದರಿಂದ ಮಹಾರಾಷ್ಟ್ರದ ಒಂದು ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಹೋಗಲಾಗಿತ್ತು. ಆಗ ಆನಂದ್ ನ ತಂದೆ-ತಾಯಿ ಪೂಜೆ ಮಾಡಿಸಿಕೊಂಡು ಹೊರಬಂದರು. ಆನಂದ್ ಮಾತ್ರ ದೇವಸ್ಥಾನದ ಮುಂದಿದ್ದ ಭಿಕ್ಷುಕರನ್ನು ಕಂಡು ಅವರಿಗೆ ಹಣ ನೀಡುವಂತೆ ತನ್ನ ತಂದೆಗೆ ದುಂಬಾಲು ಬಿದ್ದ. ಅವರೂ ಒಪ್ಪಿದರು ಒಂದಷ್ಟು ಹಣ ನೀಡಿದರು. ಅವರಿಗೆ ಬಟ್ಟೆ ಖರೀದಿಸುವಂತೆ ಸೂಚಿಸಿದರು. ಅಂದಿನಿಂದಲೇ ಆನಂದ್ ಮನಸ್ಸಿನಲ್ಲಿ ಬಡವರ ಬಗ್ಗೆ ಕಾಳಜಿ ಮೂಡಿತ್ತು, ಬಡ ಮಕ್ಕಳಿಗೆ ಸಹಾಯ ಮಾಡುವಂತೆ ಆತನ ಮನಸ್ಸು ಪದೇ ಪದೇ ಹೇಳುತ್ತಿತ್ತು. ಆದ್ದರಿಂದ ಬಾಲ್ ಕೌಪಲ್ಸ್ ಎಂಬ ಒಂದು ಚಾರಿಟಿ ಸ್ಥಾಪಿಸಿದ. ಅದರ ಮೂಲಕ ಬಡಮಕ್ಕಳ ಸಹಾಯಕ್ಕೆ ನಿಂತ.
ಶಾಲೆಯಿಂದ ಬಂದ ಕೂಡಲೇ ತನ್ನ ಚಾರಿಟಿಗೆ ಧಾವಿಸತೊಡಗಿದ. ಆರಂಭದಲ್ಲಿ ಸ್ನೇಹಿತರೊಂದಿಗೆ ಕೆಲ ಸಮಯ ಹರಟೆ, ನಂತರ ಆಟ ಹೊಡೆಯುತ್ತಿದ್ದ. ಏಕೆಂದರೆ ಯಾರಿಗೂ ಓದಲು ಬೋರ್ ಆಗಬಾರದು ಎಂಬುದು ಆನಂದ್ ಅಭಿಮತ. ಬಳಿಕ ಪುಸ್ತಕ ಹಿಡಿದು ಪಾಠ ಆರಂಭಿಸುತ್ತಿದ್ದ. ಇದು ಅನೇಕ ಮಕ್ಕಳಿಗೆ ಸಹಾಯವೂ ಆಯಿತು. ಆನಂದ್ ಕೇವಲ ಪುಸ್ತಕದಲ್ಲಿನ ವಿಷಯಗಳನ್ನಷ್ಟೇ ಹೇಳಿಕೊಡುತ್ತಿರಲಿಲ್ಲ. ಬದಲಿಗೆ ನೈತಿಕತೆಯ ಬಗ್ಗೆ ಪಾಠ ಮಾಡುತ್ತಾನೆ. ಅಚ್ಚರಿ ಎಂದರೆ ಆನಂದ್ ನ ಈ ಸಂಸ್ಥೆಯ ಮಕ್ಕಳು `ಹಮ್ ಹೋನೆ ಖಾಮ್ ಯಾಬ್’ ಎಂಬ ಹಾಡನ್ನೂ ಹಾಡುವ ಮೂಲಕ ಇತ್ತೀಚೆಗೆ ಗಮನ ಸೆಳೆದರು. ಅಲ್ಲದೇ ಬಾಲ್ ಕೌಪನ್ ಸಂಸ್ಥೆಯ ಮೂಲಕ ಕೆಲವು ಗ್ರಾಮಗಳಲ್ಲಿ ಗ್ರಂಥಾಲಯ ನಿಮರ್ಿಸಲಾಗಿದೆ. ಅದರ ಮೂಲಕ ಓದುತ್ತಿರುವ ಬಡ ಮಕ್ಕಳಿಗೆ ಸಹಾಯ ಮಾಡಲಾಗುತ್ತಿದೆ.
ಕೇವಲ 11ರ ವಯಸ್ಸಿನಲ್ಲೇ ಮಹಾನ್ ಸಾಧನೆ ಮಾಡಿದ ಆನಂದ್ ಸಾಧನೆ ಗುರುತಿಸಿ ಹತ್ತಾರು ಪ್ರಶಸ್ತಿ ಬಂದಿವೆ. ಸತ್ಯಪಾಲ್ ರತನ್ ಅವಾರ್ಡ್ ಮತ್ತು ಸೇವಾರತ್ನ ಪ್ರಶಸ್ತಿ ಅವುಗಳಲ್ಲಿ ಪ್ರಮುಖವಾದವು. ಇನ್ನು ಕಳೆದ ಶಿಕ್ಷಕರ ದಿನಾಚರಣೆಯಂದು ಆನಂದ್ ಮತ್ತು ಆತನ ಪಾಲಕರು `ಚಲೋ ಪಡೋ’ ಎಂಬ ಅಭಿಯಾನ ಆರಂಭಿಸಿದರು. ನವರಾತ್ರಿಯ ವೇಳೆ `ಚಲೋ ಬಹಾನ್, ಸ್ಕೂಲ್ ಚಲೋ’ ಎಂಬ ಅಭಿಯಾನವನ್ನು ಬಡ ಹೆಣ್ಣುಮಕ್ಕಳಿಗಾಗಿ ಆರಂಭಿಸಲಾಗಿದೆ. ಇದರ ಮೂಲಕ ಸಮಾಜದ ಕಟ್ಟ ಕಡೆಯ ಮನುಷ್ಯನನ್ನೂ ಸುಶಿಕ್ಷಿತನನ್ನಾಗಿಸುವ ಗುರಿ ಹೊಂದಲಾಗಿದೆ.
ಆ ಹುಡುಗನಿಗೆ ಕೇವಲ 11 ವರ್ಷ. ಆದರೆ ಆತ ಮಾಡಿದ ಸಾಧನೆ ಆತನ ವಯಸ್ಸಿಗೆ ಮೀರಿದ್ದು. ಆದ್ದರಿಂದ ಆನಂದ್ ಮಾಡುತ್ತಿರುವ ಈ ಅಮೂಲ್ಯ ಕಾರ್ಯಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ ಎಂಬುದೇ ನಮ್ಮ ಅಭಿಮತ.

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ವೆಲ್ ಕಮ್ ಟು ಸತ್ತವರ ಹೋಟೆಲ್..! ಜಪಾನ್ ನಲ್ಲಿ ನಿರ್ಮಾಣವಾಗಿದೆ ವಿಚಿತ್ರ ಹೋಟೆಲ್

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು

1 COMMENT

LEAVE A REPLY

Please enter your comment!
Please enter your name here