No menu items!
8.4 C
Munich
Wednesday, April 15, 2026

`ವಾಸ್ತುಪ್ರಕಾರ' ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

Must read

ಸುತ್ತಮುತ್ತ ಹಸಿರು ಗಿಡ ಮರಗಳಿದ್ರೆ ಉಸಿರಾಟಕ್ಕೆ ಒಳ್ಳೇ ಗಾಳಿ ಸಿಗುತ್ತೆ..! ಮನೆ ಅಕ್ಕ-ಪಕ್ಕ, ಹಿಂದೆ-ಮುಂದೆ ಮರಗಳು ಇದ್ರೆ ಕೆಟ್ಟದ್ದು ಅಂತ ಯಾರಾದ್ರೂ ಹೇಳ್ತಾರೇನ್ರೀ..! ವಾಸ್ತು ಪ್ರಕಾರ ಮನೆಕಟ್ಟಿಸೋದು ಓಕೆ, ಮನೆಯಲ್ಲಿ ಯಾವ್ಯಾವ ಸ್ಥಳಗಳು ಎಲ್ಲೆಲ್ಲಿ ಇರ್ಬೇಕು ಅನ್ನೋದನ್ನು ವಾಸ್ತುಪ್ರಕಾರವೇ ನೋಡಿ ಕಟ್ಟಿಸಿದ್ರೆ ಅದನ್ನೂ ಓಕೆ ಅನ್ನಬಹುದು..! ಆದ್ರೆ ವಾಸ್ತುಪ್ರಕಾರ ಮನೆಯ ಮುಂದೆ ಮರವೇ ಇರಬಾರದು ಅಂತ ಹೇಳಿದ್ರೆ ಅರ್ಥವಿದೆಯೇನ್ರೀ..? ಅಲ್ಲಾ ಸ್ವಾಮಿ, ಮರ ಇವರ ಮನೆ ಎದುರುಗಡೆ ಇರೋದಲ್ಲ..! ಮರದ ಎದರುಗಡೆ ಮನೆಕಟ್ಟಿಕೊಂಡು ವಾಸ್ತುಪ್ರಕಾರ ನಮ್ಮ ಮನೆ ಮುಂದೆ ಈ ಮರ ಇರ್ಬಾರ್ದು ಅನ್ನೋ ಮುಟ್ಟಾಳತನಕೆ ಏನ್ ಹೇಳೋಕೆ ಆಗುತ್ತೆ..!?
ಇಲ್ಲೊಂದು ವೀಡಿಯೋ ಇದೆ. ಇದು ನಮ್ಮ ಬೆಂಗಳೂರಿನ ವಿಜಯನಗದಲ್ಲಿರುವ ಒಬ್ಬರು ಅವಿವೇಕಿಗಳಿಗೆ ಸಂಬಂಧಿಸಿದ್ದು..! ಇವರ ಮನೆ ಮುಂದೆ ಎರಡು ಮರಗಳಿವೆ..! ವಾಸ್ತುಪ್ರಕಾರ ಈ ಮರ ಇರೋದು ಒಳ್ಳೇದಲ್ಲವಂತೆ..! ಹಾಗಾಗಿ ಈ ಮರವನ್ನು ಸಾಯಿಸ್ತಾ ಇದ್ದಾರೆ..! ಅರಣ್ಯ ಇಲಾಖೆಗೂ ಗೊತ್ತಾಗದಂತೆ..! ಮರವನ್ನು ಕಡಿದರೆ ಗೊತ್ತಾಗುತ್ತೆ ಅಂತ, ಆ ಮರಗಳ ಕಾಂಡದ ನಡುವಿನಲ್ಲಿ ಕೆತ್ತಿ..ಆ್ಯಸಿಡ್ ಹಾಕಿ ಮರಗಳು ನಿಧಾನಕ್ಕೆ ಸಾಯುವಂತೆ ಮಾಡ್ತಾ ಇದ್ದಾರೆ..! ಇಲ್ಲಿದೆ ಈ ವೀಡಿಯೋ..! ಬೆಂಗಳೂರಲ್ಲಿ ಮರಗಳನ್ನು ಕಾಣೊದೇ ಕಷ್ಟ..! ಅಂತದ್ರಲ್ಲಿ `ವಾಸ್ತುಪ್ರಕಾರ’ ಮರಗಳನ್ನು ಕಡಿತಾರೆಂದ್ರೆ ಏನ್ರೀ ಅರ್ಥ..! ಈ ವೀಡಿಯೋ ಶೇರ್ ಮಾಡಿ.. ಅವಿವೇಕಿಗಳಿಗೆ ಬುದ್ಧಿ ಕಲಿಸಿ..

Video :

https://www.youtube.com/watch?v=pVC1VEillFw

ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಫ್ರೆಂಡ್ಸ್ ಆಫ್ ವೈಲ್ಡ್ ಲೈಫ್ ಪೇಜ್ ನಲ್ಲಿ ಈ ಬಗ್ಗೆ ಅಪ್ ಡೇಟ್ ಮಾಡಲಾಗಿದೆ

https://www.facebook.com/groups/friendsofwildife

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ವೆಲ್ ಕಮ್ ಟು ಸತ್ತವರ ಹೋಟೆಲ್..! ಜಪಾನ್ ನಲ್ಲಿ ನಿರ್ಮಾಣವಾಗಿದೆ ವಿಚಿತ್ರ ಹೋಟೆಲ್

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article