ಅತಿಯಾದ ಕಾಫಿ ಸೇವನೆಯಿಂದ ಕಿವಿ ಕೇಳ್ಸೊಲ್ಲಾ.. ಹುಷಾರ್..!

1
388

ಈಗೆಲ್ಲಾ ಬೆಳಿಗ್ಗೆನೆ ಕಾಫಿ ಇಲ್ಲದೇ ಯಾರೂ ಬ್ರೇಕ್ ಫಾಸ್ಟ್ ಮಾಡೋಕೆ ಹೋಗೊಲ್ಲಾ, ಇನ್ನೂ ಕೆಲವರಿಗೆ ಲೀಟರ್‍ಗಟ್ಟಲೇ ಕಾಫೀ ಕುಡಿಯುವ ಹವ್ಯಾಸ, ಆಫೀಸ್‍ನಲ್ಲಂತೂ ಟೆನ್ಶನ್ ರಿಲ್ಯಾಕ್ಸ್‍ಗೋಸ್ಕರ ಪದೇ ಪದೇ ಕಾಫೀ ಕುಡಿಯೋ ಹಚ್ಚೂ ಇದೆ. ಆದರೆ ನೆನಪಿರಲೀ ಕಾಫಿ ನಮ್ಮ ದೇಹಕ್ಕೆ ಯಾವ ರೀತಿಯಲ್ಲಿ ದುಷ್ಪರಿಣಾಮ ಮಾಡುತ್ತೆ ಅಂತ ನಿಮಗೆ ಗೊತ್ತಾ..?
ಹೌದು. ಕಾಫಿಯಲ್ಲಿರುವ ಕೆಫೇನ್ ಎಂಬ ಅಂಶ ನಮ್ಮ ಕಿವಿಯ ಶ್ರವಣ ಶಕ್ತಿಯ ಮೇಲೆ ಗಂಭೀರ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ಸಮಶೊಧಕರ ತಂಡ ವರಧಿ ಮಾಡಿದೆ.
ಕೆನಡಾದಲ್ಲಿರುವ ಮ್ಯಾಕ್ ಗಿಲ್ ವಿಶ್ವ ವಿದ್ಯಾನಿಲದ ತಂಡ ಸಂಶೋಧನೆ ನಡೆಸಿ ಈ ಅಘಾತಕಾರಿ ಅಂಶವನ್ನು ಪತ್ತೆ ಮಾಡಿದ್ದಾರೆ. ಈಗಾಗಲೇ ಗದ್ದಲ ಪರಿಣಾಮದಿಂದ ಶ್ರವಣ ದೋಷ ಅನುಭವಿಸುತ್ತರುವವರು ಅತೀಯಾಧ ಕಾಫಿ ಸೇವನೆ ಮಾಡುತ್ತಿದ್ದಲ್ಲಿ ಅಂತವರಿಗೆ ಶಾಶ್ವತವಾಗಿ ಶ್ರವಣ ದೋಷ ಸಂಭವಿಸಬಹುದು ಎಂದು ತಿಳಿಸಿದ್ದಾರೆ.
ಒಂದು ವೇಳೆ ನಮ್ಮ ಕಿವಿಗಳ ಮೇಲೆ ಒಮ್ಮೆಲೆ ಜೋರಾದ ಶಬ್ದ ಬಿದ್ದರೆ ತಾತ್ಕಾಲಿಕವಾಗಿ ಶ್ರವಣ ದೋಷ ಎದುರಿಸಬಹುದು ಇದನ್ನು ಆಂಗ್ಲ ಭಾಷೆಯಲ್ಲಿ ಆಡಿಟರಿ ಟೆಂಪೋರರಿ ತ್ರಶ್ ಹೋಲ್ಡ್ ಶಿಫ್ಟ್ ಎಂದು ಕರೆಯುತ್ತಾರೆ. ಸಾಧಾರಣವಾಗಿ ಈ ರೀತಿಯಲ್ಲಾಗಿರುವ ಸಮಸ್ಯೆಯನ್ನು ಶಬ್ಧ ಬಿದ್ದ 72 ಗಂಟೆಯೊಳಗಾಗಿ ಸರಿಪಡಿಸಬಹುದು. ಆದರೆ ಕಾಫಿಯಲ್ಲಿನ ಕೆಫೇನ್ ಅದನ್ನು ಶಾಶ್ವತವಾಗಿರುವಂತೆ ಕಿವಿ ಕೇಳದಂತೆ ಮಾಡಿಬಿಡುತ್ತದೆ ಎಂದು ವರದಿ ಮಾಡಿದ್ದಾರೆ.

1 COMMENT

LEAVE A REPLY

Please enter your comment!
Please enter your name here