ಬೆಂಗಳೂರಿನ ಏಳು ಮಂದಿಯ ಕೊಲೆ ಪ್ರಕರಣಕ್ಕೆ ಹೊಸ ತಿರುವು; 15 ದಿನಗಳಲ್ಲಿ ಏಳು ಕೊಲೆ, ಮಗಳಿಗೆ ಸಾಥ್ ನೀಡಿದ ಆರೋಪ!

Must read

ಬೆಂಗಳೂರಿನ ಏಳು ಮಂದಿಯ ಕೊಲೆ ಪ್ರಕರಣಕ್ಕೆ ಹೊಸ ತಿರುವು; 15 ದಿನಗಳಲ್ಲಿ ಏಳು ಕೊಲೆ, ಮಗಳಿಗೆ ಸಾಥ್ ನೀಡಿದ ಆರೋಪ!

ಬೆಂಗಳೂರು: ಬೆಂಗಳೂರಿನಲ್ಲಿ ಏಳು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ದಿನಕ್ಕೊಂದು ಹೊಸ ವಿಚಾರಗಳು ಹೊರಬರುತ್ತಿವೆ. ಕೇವಲ 15 ದಿನಗಳ ಅವಧಿಯಲ್ಲಿ ಆರೋಪಿ ಏಳು ಮಂದಿಯನ್ನು ಹಂತ ಹಂತವಾಗಿ ಕೊಲೆ ಮಾಡಿರುವುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ವಿಚಾರಣೆ ವೇಳೆ ಆರೋಪಿ ಇಂದುಶೇಖರ್, ಅಕ್ಟೋಬರ್ 16ರಿಂದ 31ರವರೆಗೆ ಏಳು ಮಂದಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ಈ ಕೃತ್ಯಕ್ಕೆ ತನ್ನ ಮಗಳು ಹರ್ಷಿಣಿ ಕೂಡ ಸಾಥ್ ನೀಡಿದ್ದಳು ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮೃತದೇಹಗಳ ಗುರುತು ಸಿಗದಂತೆ ವಿಕೃತಿ
ಏಳು ಮಂದಿಯನ್ನು ಹತ್ಯೆ ಮಾಡಿದ ಬಳಿಕವೂ ಆರೋಪಿ ಮೃತದೇಹಗಳ ಮೇಲೆ ಕಲ್ಲು ಎತ್ತಿಹಾಕಿ ಮುಖಗಳನ್ನು ವಿರೂಪಗೊಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಕೈಕಾಲುಗಳನ್ನು ಕಟ್ಟಿ ಚೀಲಗಳಲ್ಲಿ ತುಂಬಿ ವಿವಿಧ ಸ್ಥಳಗಳಲ್ಲಿ ಮೃತದೇಹಗಳನ್ನು ಎಸೆದಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ತಂದೆ ಎ1, ಮಗಳು ಎ2 ಆರೋಪಿ
ಪ್ರಕರಣದಲ್ಲಿ ಅರ್ಜುನ್ ಅಲಿಯಾಸ್ ಇಂದುಶೇಖರ್ನನ್ನು ಎ1 ಆರೋಪಿಯನ್ನಾಗಿ ಹಾಗೂ ಆತನ ಮಗಳು ಹರ್ಷಿಣಿಯನ್ನು ಎ2 ಆರೋಪಿಯನ್ನಾಗಿ ಪೊಲೀಸರು ಪರಿಗಣಿಸಿದ್ದಾರೆ. ಇಬ್ಬರ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -spot_img

More articles

- Advertisement -spot_img

Latest article