ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆಯ ಎಂಟ್ರಿ! ಭಾರೀ ಗಾತ್ರದ ಮೊಸಳೆ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

Must read

ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆಯ ಎಂಟ್ರಿ! ಭಾರೀ ಗಾತ್ರದ ಮೊಸಳೆ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

ಬೀದರ್: ಕೆರೆಯಿಂದ ಜನವಸತಿ ಪ್ರದೇಶಕ್ಕೆ ಬೃಹತ್ ಮೊಸಳೆಯೊಂದು ನುಗ್ಗಿದ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ಸುಮಾರು 8 ಅಡಿ ಉದ್ದ ಹಾಗೂ 200 ಕೆಜಿ ತೂಕದ ಮೊಸಳೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಜನವಾಡ ಗ್ರಾಮದ ಸಮೀಪವಿರುವ ಕೆರೆಯಿಂದ ಬೃಹತ್ ಮೊಸಳೆಯೊಂದು ಜನವಸತಿ ಪ್ರದೇಶದತ್ತ ಬಂದಿದ್ದು, ಅದನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗ್ರಾಮದಲ್ಲಿ ಮೊಸಳೆ ಕಾಣಿಸಿಕೊಂಡ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಗ್ರಾಮದೊಳಗೆ ಕಾಣಿಸಿಕೊಂಡ ಮೊಸಳೆಯು ಸುಮಾರು ಎರಡು ಕ್ವಿಂಟಾಲ್ ತೂಕ ಹಾಗೂ ಎಂಟು ಅಡಿ ಉದ್ದವಿತ್ತು ಎಂದು ತಿಳಿದುಬಂದಿದೆ. ಇಷ್ಟು ದೊಡ್ಡ ಮೊಸಳೆ ಜನವಸತಿ ಪ್ರದೇಶಕ್ಕೆ ಬಂದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಜನವಾಡ ಕೆರೆಯಲ್ಲಿ ಮತ್ತಷ್ಟು ಮೊಸಳೆಗಳಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ಜನರಲ್ಲಿ ಭಯ ಮೂಡಿಸಿದೆ. ವಿಶೇಷವಾಗಿ ಕೆರೆಯ ಬಳಿ ಓಡಾಡುವ ಗ್ರಾಮಸ್ಥರು ಹಾಗೂ ಜಾನುವಾರುಗಳನ್ನು ಮೇಯಿಸಲು ತೆರಳುವವರು ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊಸಳೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಜನವಾಡ ಗ್ರಾಮಕ್ಕೆ ಆಗಮಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಮೊಸಳೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಅರಣ್ಯಾಧಿಕಾರಿಗಳು ಬೃಹತ್ ಮೊಸಳೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಈ ವೇಳೆ ಗ್ರಾಮಸ್ಥರು ಕೂಡ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಿದ್ದಾರೆ. ಮೊಸಳೆ ಸೆರೆಯಾದ ಬಳಿಕ ಗ್ರಾಮಸ್ಥರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಜನವಾಡ ಕೆರೆಯಲ್ಲಿ ಇನ್ನಷ್ಟು ಮೊಸಳೆಗಳಿರುವ ಶಂಕೆ ವ್ಯಕ್ತವಾಗಿರುವುದರಿಂದ ಗ್ರಾಮಸ್ಥರ ಆತಂಕ ಸಂಪೂರ್ಣವಾಗಿ ದೂರವಾಗಿಲ್ಲ. ಕೆರೆಯ ಸುತ್ತಮುತ್ತ ಸಂಚರಿಸುವಾಗ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಸೂಚಿಸಿದ್ದಾರೆ.
ಕೆರೆಯ ಬಳಿ ಅನಗತ್ಯವಾಗಿ ತೆರಳದಂತೆ ಹಾಗೂ ಮೊಸಳೆಗಳು ಕಂಡುಬಂದರೆ ಅವುಗಳ ಸಮೀಪ ಹೋಗದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article