‘The Darwin’s in ದಂಡಿದುರ್ಗ’ಹೊಸಬರಿಗೆ ಸಾಥ್ ಕೊಟ್ಟ ನಿರ್ದೇಶಕ ಸತ್ಯಪ್ರಕಾಶ್

0
54

ಕನ್ನಡ ಸಿನಿ ಲೋಕದಲ್ಲಿ ವಿಭಿನ್ನ ಮಾದರಿಯ ಸಿನಿಮಾಗಳ ಮೂಲಕ ಹೊಸ ಹೊಸ ತಂಡಗಳ ಎಂಟ್ರಿ ಕೊಡ್ತಾನೆ ಇರ್ತಾರೆ . ಈಗ ಅದೇ ಹಾದಿಯಲ್ಲಿ ಹಾದಿಯಲ್ಲಿ ಯುವ ಸಿನಿಮೋತ್ಸಾಹಿ ತಂಡವೊಂದು ಚಿತ್ರರಂಗ ಪ್ರವೇಶಿಸಿದ್ದು, ‘The Darwin’s in ದಂಡಿದುರ್ಗ’ ಎಂಬ ಸಿನಿಮಾವನ್ನು ತಯಾರಿಸುತ್ತಿದ್ದಾರೆ . ಕಳೆದ ಎಂಟು ವರ್ಷಗಳಿಂದ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ, ಕೋ ಡೈರೆಕ್ಟರ್, ರೈಟರ್ ಕೆಲಸ ಮಾಡಿರುವ ಅನುಭವವಿರುವ ತ್ರಿಭುವನ್ ಶ್ರೀಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

 

ಈ ಚಿತ್ರ ಮೂಲಕ ತ್ರಿಭುವನ್ ನಿರ್ದೇಶಕರಾಗಿದ್ದಾರೆ . ಇವತ್ತು ಬೆಂಗಳೂರಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸಿನಿಮಾದ ಮುಹೂರ್ತ ನೆರವೇರಿದ್ದು, ನಿರ್ದೇಶಕ ಕಂ ನಿರ್ಮಾಪಕ ಸತ್ಯಪ್ರಕಾಶ್, ನಟ ಅಜಯ್ ರಾವ್, ನಿರ್ಮಾಪಕ ಕೆ ಮಂಜು ಹೊಸಬರ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ತ್ರಿಭುವನ್ ಶ್ರೀಕಾಂತ್, ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡ್ತಿದ್ದು, ಕಳೆದ ಎಂಟು ವರ್ಷಗಳಿಂದ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ, ಕೋ ಡೈರೆಕ್ಟರ್, ರೈಟರ್ ಆಗಿ ದುಡಿಯುತ್ತಿದ್ದೇನೆ . ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. The Darwin’s in ದಂಡಿದುರ್ಗ. ಇದು ಹೆಸ್ರು ಹೇಳುವಾಗ ಹಾಗೇ. ದಂಡಿದುರ್ಗ ಇದೊಂದು ಜಾಗ.. ಪ್ರತಿಯೊಂದು ಜಾಗಕ್ಕೂ ಅದರದೇ ಆದ ವ್ಯಾಕರಣ, ಇತಿಹಾಸ, ಸೊಗಡು, ಘಮಲು ಇರುತ್ತದೆ ಎಂದರು .

ಬೈ ಒನ್ ಗೆಟ್ ಒನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದ ಯುವ ಪ್ರತಿಭೆಗಳಾದ ಮಿಥುನ್ ಮತ್ತು ಮಿಲನ್ ‘The Darwin’s in ದಂಡಿದುರ್ಗ’ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದು, ಆರತಿ ನಾಯರ್ ನಾಯಕಿಯಾಗಿ ಬಣ್ಣ ಹಚ್ಚಲಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಸಿನಿಮಾದ ಟೈಟಲ್ ಹೇಳುವಂತೆ ಇದು ದಂಡಿದುರ್ಗದ ಕಥೆ. ಅಲ್ಲಿನ ಜನರ ಪ್ರೀತಿ , ದ್ವೇಷ, ಕಾಮ, ರಾಜಕೀಯ ಹೋರಾಟ, ದೇವರು, ಧರ್ಮ ಎಲ್ಲವೂ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತದೆ. ದಂಡಿದುರ್ಗದ ಗದ್ದುಗೆಗೆ ಪ್ರಬಲ ಶಕ್ತಿಗಳ ನಡುವಿನ ಹೋರಾಟದ ಕಥಾನಕ ಸಿನಿಮಾದ ಮುಖ್ಯವಸ್ತುವಾಗಿದೆ. SBSC ಕ್ರಿಯೇಷನ್ ನಡಿ ಮಧುರಾಜ್ ನಿರ್ಮಾಣ ಮಾಡ್ತಿರುವ ಎರಡನೇ ಸಿನಿಮಾ ಇದಾಗಿದ್ದು, ರಾಮ ರಾಮ ರೇ ಸಿನಿಮಾ ಖ್ಯಾತಿಯ ಲವಿತ್ ಕ್ಯಾಮೆರಾ ಕೈಚಳಕ, ಉಮೇಶ್ ಸಂಕಲನ, ಅನಿಲ್ ಸಿಜೆ ಸಂಗೀತ ಸಿನಿಮಾಕ್ಕಿದೆ. ಎರಡು ಹಂತದಲ್ಲಿ ಶೂಟಿಂಗ್ ನಡೆಸುವ ಪ್ಲ್ಯಾನ್ ಹಾಕಿಕೊಂಡಿರುವ ಚಿತ್ರತಂಡ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತ ಹಾಗೂ ಬಳ್ಳಾರಿಯಲ್ಲಿ ಚಿತ್ರೀಕರಣ ನಡೆಸಲಿದೆ. ಸೆಪ್ಟಂಬರ್ ಮೂರನೇ ವಾರದಲ್ಲಿದಲ್ಲಿ ‘The Darwin’s in ದಂಡಿದುರ್ಗ’ ಸಿನಿಮಾದ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಸೌತ್ ಇಂಡಸ್ಟ್ರೀಯ ಇಬ್ಬರು ಸೂಪರ್ ಸ್ಟಾರ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಮಾಹಿತಿ ಇದೆ.

LEAVE A REPLY

Please enter your comment!
Please enter your name here